ದಿನಾಂಕ 28-12-2017 ರಂದು ಗೋಕರ್ಣದ ಬೇಲೇಹಿತ್ತಲನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 21 ಬಡ ಫಲಾನುಭವಿಗಳಿಗೆ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಉಚಿತ ಅಡಿಗೆ ಅನಿಲದ ಕಿಟ್ ಗಳೊಂದಿಗೆ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ತಮ್ಮ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಬೇಲೇಹಿತ್ತಲನಲ್ಲಿ 21 ಅರ್ಹ ಬಡ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲದ ಕಿಟ್‍ಗಳು ಹಾಗೂ ಉಚಿತ ಲೈಟರಗಳನ್ನು ವಿತರಿಸಿ ಮಾತನಾಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರ ಮನೆಗಳನ್ನು ಹೊಗೆಮುಕ್ತರನ್ನಾಗಿಸಬೇಕು, ಮಹಿಳೆಯರ ಸ್ವಾಸ್ಥ್ಯ ಹಾಗೂ ಪರಿಸರ ನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಇಂತಹ ಜನಪರ ಯೋಜನೆ ಬಡವರ ಮನೆ ಮನೆಗೆ ತಲುಪಬೇಕು. ಪ್ರಧಾನ ಮಂತ್ರಿಯವರ ಉದ್ದೇಶ ಈಡೇರಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಈ ಯೋಜನೆಯ ಸೌಲಭ್ಯವನ್ನು ಅರ್ಹ ಬಡ ಫಲಾನುಭವಿಗಳ ಮನೆಗೆ ತಲುಪಿಸಬೇಕೆಂಬ ಆಶಯದೊಂದಿಗೆ ನಿಃಸ್ವಾರ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಡವರು ತಮ್ಮ ಕೂಲಿ ಕೆಲಸ ಬಿಟ್ಟು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಿದೆ. ಬಡ ಜನರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದು ಉಚಿತವಾಗಿ ಸಿಗುವ ಎಲ್ಲ ಸೌಲಭ್ಯಗಳನ್ನು ಕೂಡಾ ಬಡವರಿಗೆ ತಲುಪಿಸಬೇಕು. ಇದರಿಂದ ಅವರಿಗೆ ಇನ್ನೂ ಹೆಚ್ಚಿನ ಅನುಕೂಲತೆ ಉಂಟಾಗಲಿದೆ ಎಂಬ ಸದುದ್ದೇಶದಿಂದ ಆತ್ಮ ಸಂತೃಪ್ತಿಯಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಡಾ|| ಎಸ್. ವಿ. ಜಠಾರ ಅವರು ಮಾತನಾಡಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಯೋಜನೆಯಾಗಿದೆ. ಇಂತಹ ಯೋಜನೆಯ ಅನುಕೂಲತೆಯನ್ನು ಅರ್ಹರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ನಾಗರಾಜ ನಾಯಕ ತೊರ್ಕೆ ಅವರು ಉತ್ತಮ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಫಲಾನುಭವಿಗಳಾದ ಪಾರ್ವತಿ ಮೂಡಂಗಿ, ಸಾವಿತ್ರಿ ಸೋಮಯ್ಯ ಅಂಬಿಗ, ಪರಮೇಶ್ವರಿ ಸೋಮಯ್ಯ ಅಂಬಿಗ, ಶೋಭಾ ತೊಕ್ಕು ಅಂಬಿಗ, ವೆಂಕಮ್ಮ ಈಶ್ವರ ಅಂಬಿಗ, ಗಂಗೆ ದಯಾನಂದ ಅಂಬಿಗ, ಪಾರ್ವತಿ ಶಾಂತಿ ಗೌಡ, ಸಾವಿತ್ರಿ ಮಂಜು ಅಂಬಿಗ, ಕೆಂಪಿ ಸೋಮಯ್ಯ ಅಂಬಿಗ, ಮೀನಾಕ್ಷಿ ಮಂಜುನಾಥ ಭಟ್ಕಳಕರ, ರಾಧಾ ಮಹಾದೇವ ಭಂಡಾರಿ, ಗಂಗೆ ಮಹಾಬಲೇಶ್ವರ ಗೌಡ, ಸಾವಿತ್ರಿ ಸುಕ್ರು ಗೌಡ, ಲಕ್ಷ್ಮಿ ಗೋಯ್ದು ಗೌಡ, ಲಕ್ಷ್ಮಿ ದೇವು ಗೌಡ, ಸುಶೀಲಾ ಪುರುಷಿ ಅಂಬಿಗ, ಮಂಕಾಳಿ ಗೋಯ್ದು ಗೌಡ, ಸೀತಾ ವೆಂಕ್ಟ ಗೌಡ, ಮೀರಾ ದೇವಿದಾಸ ಬಸ್ತೀಕರ, ಜಯಂತಿ ಸುರೇಶ ಅಂಬಿಗ, ಸೋಮಿ ಮಾಣೇಶ್ವರ ಗೌಡ, ಇವರುಗಳು ಉಚಿತ ಗ್ಯಾಸ ಕಿಟ್ ಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗಣಪತಿ ಸ್ವಾಮಿ, ಚಂದ್ರು ಅಂಬಿಗ, ಮಂಕಾಳಿ ಅಂಬಿಗ (ಊರಗೌಡರು), ಗಣೇಶ ಪಂಡಿತ, ಪಾಂಡುರಂಗ ನಾಯ್ಕ, ವೆಂಕಟ್ರಮಣ ಕವರಿ, ಶ್ರೀನಿವಾಸ ದೇವಣ್ಣ ನಾಯಕ ನಾಡುಮಾಸ್ಕೇರಿ, ದತ್ತಾ ನಾಯ್ಕ, ಮಂಜು ಸ್ವಾಮಿ, ಸದಾನಂದ ನಾಯ್ಕ, ಸುರೇಶ ಭಟ್ಟ ಗೋಕರ್ಣ, ಸತೀಶ ಭಂಡಾರಿ ಗೋಕರ್ಣ, ಗುರು ಅಂಬಿಗ, ಸಂದೀಪ ಅಂಬಿಗ, ಸಂತೋಷ ಅಂಬಿಗ ಮುಂತಾದವರು ಉಪಸ್ಥಿತರಿದ್ದರು. ಅರುಣ ಕವರಿಯವರು ಸ್ವಾಗತಿಸಿದರು.