ಕಾರವಾರ:ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಸಿಬ್ಬಂದಿ ತಾಲ್ಲೂಕಿನ ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₨ 2.5 ಲಕ್ಷ ಮೌಲ್ಯದ ಗೋವಾ ಅಕ್ರಮ ಮದ್ಯದ ಬಾಟಲಿಗಳನ ವಶಕ್ಕೆ ಪಡೆದುಕೊಂಡಿದ್ದಾರೆ.

‘ನೋಂದಣಿ ಸಂಖ್ಯೆ ಹೊಂದಿರದ ಐದು ಸ್ಕೂಟರ್‌ಗಳಲ್ಲಿ ಅರಣ್ಯ ಮಾರ್ಗದಿಂದ 51 ಚೀಲದಲ್ಲಿ ಒಟ್ಟೂ 186 ಲೀ. ಗೋವಾ ಮದ್ಯ ಮತ್ತು 1,035 ಲೀ. ಗೋವಾ ಫೆನ್ನಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲು ನಿಂತಿದ್ದನ್ನು ದೂರದಿಂದ ನೋಡಿದ ಆರೋಪಿಗಳು, ಮದ್ಯದ ಚೀಲಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ್ದ ಸ್ಕೂಟರ್‌ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕತ್ತಲಾಗಿದ್ದರಿಂದ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ’ ಎಂದು ಅಬಕಾರಿ ನಿರೀಕ್ಷಕ ಮಂಜುನಾಥ ಅರೆಗುಳಿ ತಿಳಿಸಿದರು.

RELATED ARTICLES  ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಶಾರದಾ ಪೂಜೆ : ಮಕ್ಕಳಿಂದ ವಾಗ್ದೇವಿ ಆರಾಧನೆ.

‘ಸಾಗಾಟದಲ್ಲಿ ಹೋಟೆಗಾಳಿಯ ರಾಜೇಂದ್ರ ಪಡವಳಕರ್, ಪಂಕಜ ಕಾಂಬಳೆ, ದೀಪಕ ಪಡುವಳಕರ್ ಇದ್ದರು ಎಂದು ಸಿಬ್ಬಂದಿ ಗುರುತಿಸಿದ್ದಾರೆ. ಈ ಹಿಂದೆಯೂ ಇವರ ವಿರುದ್ಧ ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಸದ್ಯ ಜಪ್ತಿ ಮಾಡಿಕೊಂಡಿರುವ ವಾಹನಗಳ ಅಂದಾಜು ಮೌಲ್ಯ ₨ 30 ಸಾವಿರ’ ಎಂದು ಅವರು ತಿಳಿಸಿದರು.

RELATED ARTICLES  ಅಂದಾಜು 40 ಲಕ್ಷ ಅನುದಾನದ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆನೀಡಿದ‌ ಶಾಸಕಿ ಶಾರದಾ ಶೆಟ್ಟಿ.

ಕಾರ್ಯಾಚರಣೆಯು ಅಬಕಾರಿ ಉಪ ಆಯುಕ್ತ ಎನ್.ಎಸ್. ಶಾಮಜೋಯಿಸ್ ಮಾರ್ಗದರ್ಶನದಲ್ಲಿ ನಡೆದಿದ್ದು, ಅಬಕಾರಿ ರಕ್ಷಕರಾದ ಆನಂದು ಪೊಂಡೇಕರ, ಎಂ.ಎಂ.ನಾಯ್ಕ, ಟಿ.ಬಿ.ಗೊಂಡ, ವಿಶಾಲ ನಾಯ್ಕ ಮತ್ತು ವಾಹನ ಚಾಲಕರಾದ ಶಾಮನೂರು ಜಮಾಧಾರ, ರವಿಚಂದ್ರ ನಾಯ್ಕ, ವಿನೋದ ನಾಯ್ಕ, ಪರೇಶ ದೇಸಾಯಿ ಮತ್ತು ದಿನೇಶ ರಾಣೆ ಭಾಗವಹಿಸಿದ್ದರು.