ಮುಂಡಗೋಡ; ಮಹಾದಾಯಿ ಕಳಸಾ ಬಂಡೂರಿ ನದಿ ನೀರು ವಿವಾದ ಇತ್ಯಾರ್ಥ ಆಗುವ ವರೆಗೂ ರಾಜ್ಯದಲ್ಲಿ ಚುನಾವಣೆ ಬೇಡ ಎಂದು ತಾಲೂಕಾ ಕರ್ನಾಟಕ ರಕ್ಷಣಾ ವೇಧಿಕೆಯವರು ತಹಶೀಲ್ದಾರ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮತ್ತು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಕಳಸಾ ಬಂಡೂರಿ ಹೋರಾಟದಲ್ಲಿ ಹತರಾದ ರೈತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಹೋರಾಟಕ್ಕೆ ಜಯ ಸಿಗಬೇಕಾಗಿದೆ ಮಹದಾಯಿ ನೀರಿನ ಇತ್ಯರ್ಥವಾಗಬೇಕು ಮಹಾದಾಯಿ ಹೋರಾಟ ಇಂದಿಗೆ 899 ದಿನಗಳು ಕಳೆದರು ಕರ್ನಾಟಕ ರಾಜ್ಯದಲ್ಲಿ 2013 ಎಪ್ರೀಲ್ ನಿಂದ 2017 ನವೆಂಬರ ವರೆಗೆ ರಾಜ್ಯದಲ್ಲಿ ಸುಮಾರು 3515 ರೈತರ ಆತ್ಮಹತ್ಯೆಗಳು ಆಗಿದೆ. ಎಂದು ರಾಜ್ಯ ಕ್ರಷಿ ಇಲಾಖೆಯ ಅಂಕಿ ಅಂಶ ತಿಳಿದು ಬಂದಿದ್ದು. ಚುನಾವಣಿಯ ಹೊಸ್ತಿಲಲ್ಲಿ ಮಹಾದಾಯಿ ನದಿ ನೀರು ಹರಿಸಿದರೆ ಲಾಭ ಯಾವ ಪಕ್ಷಕ್ಕೆ ಹೆಚ್ಚಾಗುತ್ತದೆ.ಎಂಬ ವಿಚಾರ ನಡೆಯತ್ತಿದೆ. ಯಾಕೆಂದರೆ 15 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಹಾದಾಯಿ ನೀರು ರಾಜಕಿಯವಾಗಿ ಪರಿಣಾಮ ಬೀರಲಿದೆ. ಆದ್ದರಿಂದ ಮಹಾದಾಯಿ ನದಿ ನೀರು ವಿವಾದದ ಬಗ್ಗೆ ತಮ್ಮಲ್ಲಿ ವಿನಂತಿಸುತ್ತೆವೆ. ಮಹಾದಾಯಿ ಹೋರಾಟ ಧಾರಾವಾಹಿಯಂತೆ ನೋಡುತ್ತಿದ್ದಾರೆ ರಾಜಕೀಯ ಮುಖಂಡರೆಲ್ಲಾ ಕೀಲಾಡಿಗಳಾಗಿದ್ದಾರೆ. ಧಾರಾವಾಹಿ ತರ ಎಳೆಯುತ್ತಿದ್ದಾರೆ.ರೈತರ ಹೋರಾಟದ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಯಾವುದೆ ಪಕ್ಷದ ಅಪ್ಪ ಅಮ್ಮ ಆಗಲಿ ನಮ್ಮ ಅಪ್ಪ ಅಮ್ಮ ಆಗಲಿ ಎಲ್ಲರು ತಿನ್ನ ಬೇಕಾಗಿದ್ದು ಅನ್ನವೆ ರೈತ ಕಣ್ಣಿರು ಹಾಕುವುದು ಸರಿಯಲ್ಲ ಈಗ ಚುನಾವಣೆ ನಡೆದ ಅಭ್ಯರ್ಥಿಗಳು ಗೆದ್ದು ಬಂದರೆ ಅದು ರೈತ ಸಮಾಧೀಯ ಮೇಲೆ ಮನೆ ಕಟ್ಟಿದಂತಾಗುತ್ತದೆ. ಕಳಸಾ ಬಂಡೂರಿ ಹೋರಾಟದಲ್ಲಿ ಹತರಾದ ರೈತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ. ಹೋರಾಟಕ್ಕೆ ಜಯ ಸಿಗಬೇಕಾಗಿದೆ.ಆದ ಕಾರಣ ಮಾನ್ಯ ರಾಜ್ಯಪಾಲರು ಹಾಗೂ ರಾಷ್ಟ್ರ ಮತ್ತು ರಾಜ್ಯ ಚುನಾವಣಾ ಅಧಿಕಾರಿಗಳಲ್ಲಿ ಕೇಳಿಕೊಳ್ಳುವುದೆನೆಂದರೆ ಕಳಸಾ ಬಂಡೂರಿ ವಿಚಾರ ಬಗೆ ಹರಿಯುವ ವರೆಗೂ ರಾಜ್ಯದಲ್ಲಿ ಚುನಾವಣೆ ಬೇಡ ಎಂದು ಕರ್ನಾಟಕ ರಕ್ಷಣಾ ವೇಧಿಕೆ ಕೇಳಿಕೊಳ್ಳುತ್ತದೆ ಎಂದು ಮನವಿಯಲ್ಲಿ ತೀಳಿಸಲಾಗಿದೆ.
ಈ ಸಂದರ್ಭದಲ್ಲಿ ಕ.ರ.ವೇ ತಾಲೂಕಾ ಅಧ್ಯಕ್ಷ ಅರುಣ ಭಜಂತ್ರಿ,ಮಂಜು ಕಲಾಲ. ರಮೇಶ ಕಲಾಲ, ಬಸ್ಸು, ಸಿದ್ದು ಗೌಳಿ, ಮುಂತಾದವರಿದ್ದರು.