ಬೆಂಗಳೂರು: ಈಗಿನ ಕ್ರಿಕೆಟ್ ಜಗತ್ತಲ್ಲಿ ಕ್ರಿಕೆಟಿಗರು ಕೋಟಿ ಕೋಟಿ ರೂಪಾಯಿಗಳನ್ನು ಜೇಬಿಗಿಳಿಸುತ್ತಾರೆ. ಆಡಿದ್ರೂ ದುಡ್ಡು, ಆಡದಿದ್ರೂ ದುಡ್ಡು. ಬ್ಯಾಟ್ ಗೆ ಅಂಟಿಸೋ ಸ್ಟಿಕ್ಕರ್ ನಲ್ಲಂತೂ ಕೋಟಿ ಮೊತ್ತದಲ್ಲಿ ದುಡ್ಜು ಕ್ರಿಕೆಟಿಗರ ಜೇಬು ಸೇರುತ್ತದೆ.
ಟೀಮ್ ಇಂಡಿಯಾ ಆಟಗಾರರ ಪೈಕಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಸ್ಟಿಕ್ಕರ್ ಗೆ ಅತಿ ಹೆಚ್ಚು ದುಡ್ಡು ಪಡೆಯುವ ಆಟಗಾರ. ವಿರಾಟ್ ಕೊಹ್ಲಿ ಅವರಿಗೆ ಎಂಆರ್ ಎಫ್ ಸಂಸ್ಥೆ ತನ್ನ ಬ್ಯಾಟ್ ಸ್ಟಿಕ್ಕರ್ ಬಳಸುವ ಕಾರಣಕ್ಕೆ 8 ವರ್ಷಕ್ಕೆ ಬರೋಬ್ಬರು 100 ಕೋಟಿ ರೂ.ಗಳನ್ನು ನೀಡುತ್ತಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ತಮ್ನ ಬ್ಯಾಟ್ ನಲ್ಲಿ ಆಸ್ಟ್ರೇಲಿಯಾ ಮೂಲದ ಸ್ಪಾರ್ಟನ್ ಸ್ಪೋರ್ಟ್ಸ್ ಕಂಪನಿಯ ಸ್ಟಿಕ್ಕರ್ ಬಳಸುತ್ತಾರೆ. ಇದಕ್ಕಾಗಿ ಧೋನಿಗೆ ಸ್ಪಾರ್ಟನ್ ಕಂಪನಿ ವಾರ್ಷಿಕ 6 ಕೋಟಿ ರೂ.ಗಳನ್ನು ನೀಡುತ್ತಿದೆ.
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಯೆಟ್ ಕಂಪನಿಯ ಬ್ಯಾಟ್ ಸ್ಟಿಕ್ಕರ್ ಬಳಸುತ್ತಿದ್ದು ಇದಕ್ಕಾಗಿ ರೋಹಿತ್ ಗೆ ಸಿಯೆಟ್ ಕಂಪನಿ ವಾರ್ಷಿಕ 3 ಕೋಟಿ ರೂ.ಗಳನ್ನು ನೀಡುತ್ತಿದೆ.