ಬೆಂಗಳೂರು: ಜನವರಿ 10ರಂದು ಭೂಪರಿವೀಕ್ಷಣ ಉಪಗ್ರಹ ‘ಕಾರ್ಟೊಸ್ಯಾಟ್’ ಸೇರಿದಂತೆ 31 ಉಪ ಗ್ರಹಗಳನ್ನು ಭಾರತ ಉಡಾವಣೆ ಮಾಡಲಿದೆ ಎಂದು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜನವರಿ 10ರಂದು ಬೆಳಗ್ಗೆ 930ಕ್ಕೆ ಪಿಎಸ್‌ಎಲ್‌ವಿ -ಸಿ40 ರಾಕೆಟ್, ಕಾರ್ಟೊ ಸ್ಯಾಟ್–3ರ ಜತೆ ಇನ್ನೂ 30 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ ಎಂದು ಇಸ್ರೊ ನಿರ್ದೇಶಕ ದೇವಿ ಪ್ರಸಾದ್ ಕಾರ್ನಿಕ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದೇ ವರ್ಷದ ಫೆಬ್ರುವರಿಯಲ್ಲಿ ಈ ಸರಣಿಯ ಮೊದಲ ಮತ್ತು ಜೂನ್‌ನಲ್ಲಿ ಈ ಸರಣಿಯ ಎರಡನೇ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.
ಆಗಸ್ಟ್‌ನಲ್ಲಿ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ 1ಎಚ್ (ಐಆರ್‌ಎನ್‌ಎಸ್‌ಎಸ್‌–1ಎಚ್) ಉಪಗ್ರಹವನ್ನು ಹೊತ್ತಿದ್ದ ಪಿಎಸ್‌ಎಲ್‌ವಿ–ಸಿ39 ಕಾರ್ಯಾಚರಣೆಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿತ್ತು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 24-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ರಾಕೆಟ್‌ನ ಮುಂಭಾಗದ ಉಷ್ಣ ಕವಚವು ತೆರೆದುಕೊಳ್ಳದೇ ಇದ್ದುದ್ದರಿಂದ, ಅದರೊಳಗಿದ್ದ ಉಪಗ್ರಹ ಹೊರಗೆ ಬರಲು ಸಾಧ್ಯವಾಗದೆ ಕಾರ್ಯಾಚರಣೆ ವಿಫಲವಾಗಿತ್ತು. ಆ ವೈಫಲ್ಯದ ನಂತರ ಇದೇ ಮೊದಲ ಬಾರಿ ಪಿಎಸ್‌ಎಲ್‌ವಿ ಯನ್ನು ಬಳಸಿಕೊಳ್ಳಲಾಗುತ್ತಿದೆ.

RELATED ARTICLES  ರಾಜ್ಯದಲ್ಲೂ ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರವೆಸಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೆಂತಾ ದುರಂತ..!