ಕುಮಟಾ : ಮಿರ್ಜಾನ ಮತ್ತು ಬರ್ಗಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲದ ಕಿಟ್ ಗಳೊಂದಿಗೆ ಟ್ರಸ್ಟ್ ನ ವತಿಯಿಂದ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಮಹಿಳೆಯರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಯಾಗಿದೆ. ಇದೊಂದು ಜನಪರ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕಡು ಬಡವರು ಕೂಡಾ ಎಲ್.ಪಿ.ಜಿ. ಗ್ಯಾಸ್ ಬಳಸಬೇಕೆಂಬ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ ಹೊಂದಿದ, ಇದುವರೆಗೂ ಗ್ಯಾಸ್ ಸಂಪರ್ಕವನ್ನು ಹೊಂದಿರದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ ಕಿಟ್ ಗಳನ್ನು ಒದಗಿಸಲಾಗುತ್ತಿದೆ. ಫಲಾನುಭವಿಗಳು ಸಂಪೂರ್ಣ ಉಚಿತವಾಗಿ ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆಯಿಂದ ನಾವೆಲ್ಲ ಕಾರ್ಯಪ್ರವೃತ್ತರಾಗಿದ್ದೇವೆ. ಯಾರಿಗಾದರೂ ಈ ಯೋಜನೆಯ ಸೌಲಭ್ಯ ದೊರೆಯದಿದ್ದಲ್ಲಿ ತಮ್ಮನ್ನು ಸಂಪರ್ಕಿಸಿದರೆ ತಾವು ಖಂಡಿತವಾಗಿ ಅರ್ಹ ಫಲಾನುಭವಿಗಳಿಗೆ ಗ್ಯಾಸ ಸಂಪರ್ಕ ಪಡೆದುಕೊಳ್ಳುವಲ್ಲಿ ಸಹಕರಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಕೇಂದ್ರದಿಂದ ಬರುವ ಎಲ್ಲಾ ಯೋಜನೆಗನ್ನು ಬಡವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷರಾದ ನಾಗರಾಜ ನಾಯ್ಕ ಅವರು ಮಾತನಾಡಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದಾಗಿ ಬಡವರಿಗೆ ಅನುಕೂಲತೆ ಉಂಟಾಗಿದೆ. ನಾಗರಾಜ ನಾಯಕ ತೊರ್ಕೆಯವರು ಹಲವಾರು ಗ್ರಾಮಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಸುಲಭವಾಗಿ, ಉಚಿತವಾಗಿ ಗ್ಯಾಸ ಸಂಪರ್ಕ ಒದಗಿಸುತ್ತಿರುವುದಲ್ಲದೇ ತಮ್ಮ ಟ್ರಸ್ಟಿನಿಂದ ಉಚಿತವಾಗಿ ಲೈಟರಗಳನ್ನು ಸಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಮಿರ್ಜಾನಿನ ರಾಧಾ ಏ. ಅಂಬಿಗ, ಭವಾನಿ ಪಿ. ಮರಾಠಿ, ಲಲಿತಾ ಡಿ. ಮರಾಠಿ, ಪಾರ್ವತಿ ಪಿ. ಪಟಗಾರ, ಮಂಜುಳಾ ಜಟ್ಟು ಗೌಡ, ರಜಿಯಾ ಇಬ್ರಾಹಿಮ್, ಚಂದ್ರಕಲಾ ಗೋಪಾಲ ಮರಾಠಿ, ರಾಧಾ ವೆಂಕಟ್ರಮಣ ಅಂಬಿಗ, ಮಹಾಲಕ್ಷ್ಮಿ ಬಿ. ನಾಯ್ಕ, ರೂಪಾ ಸುರೇಶ ನಾಯ್ಕ, ಲೀಲಾವತಿ ಎಂ. ಮರಾಠಿ, ದ್ಯಾವಮ್ಮ ಟಿ. ಮರಾಠಿ ಇವರುಗಳು ಹಾಗೂ ಬರ್ಗಿಯ ಖುಷೀದಾ ಎಂ. ಭಟ್ಕರ, ಭಾಗೀರಥಿ ಪರಮೇಶ್ವರ ಗಾವಡಿ, ಸೀತಾ ಪಿ. ಪಟಗಾರ, ಮರಿಯಂಬಿ ಶೌಕತ್ ಭಟ್ಕರ ಇವರುಗಳು ಉಚಿತ ಗ್ಯಾಸ ಕಿಟ್ ಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ವೆಂಕಟ್ರಮಣ ಕವರಿ, ಸದಾನಂದ ನಾಯ್ಕ ನಾಗರಾಜ ನಾಯ್ಕ, ಗೋಪಾಲ ನಾಯ್ಕ, ಪ್ರೇಮಾ ನಾಯ್ಕ, ಸಂತೋಷ ಕಿಮಾನಿ, ಸುರೇಶ ಜಾಲಿಸತ್ಗಿ, ಜಗದೀಶ ಗಿರಿಯನ್, ದಿವಾಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.