ಕುಮಟಾ: ಗೋಕರ್ಣದ ಬಾವಿಕೊಡ್ಲದ (ನಂ.01) ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಗಾಯತ್ರಿ ಗೌಡ ಉದ್ಘಾಟಿಸಿದರು ನಂತರ ಮಾತನಾಡಿದ ಅವರು – ವಿದ್ಯಾರ್ಥಿಗಳು ಸದಾ ಹೊಸದನ್ನು ಕಲಿಯುವ ಉತ್ಸಾಹವನ್ನು ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲೆ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

IMG 20171230 WA0016

ಈ ಸಂದಂರ್ಭದಲ್ಲಿ ಬಿ.ಜೆ.ಪಿ. ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ – ಇಂದು ಇಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಕ್ಕಳು, ಶಿಕ್ಷಕರು, ಎಲ್ಲರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ವಾರ್ಷಿಕೋತ್ಸವ ಕಾರ್ಯಕ್ರಮವು ಒಂದು ಶೈಕ್ಷಣಿಕ ವರ್ಷದ ಕೊನೆಯ ಕಾರ್ಯಕ್ರಮವಾಗಿದೆ. ಒಂದು ವರ್ಷದ ಅವಧಿಯಲ್ಲಿ ಶಿಕ್ಷಣದ ಜೊತೆ ಕ್ರೀಡೆ ಸೇರಿದಂತೆ ಹತ್ತು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಮಕ್ಕಳು ಆಟದ ಜೊತೆ ಪಾಠವನ್ನು ಕಲಿಯುತ್ತಾರೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಆದ್ಯತೆ ನೀಡದೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಸತತ ಪರಿಶ್ರಮ ಹಾಗೂ ಪ್ರಯತ್ನದ ಮೂಲಕ ಮಾತ್ರ ಯಶಸ್ಸು ಗಳಿಸಲು ಸಾದ್ಯ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ದೈಹಿಕ ಸದೃಢತೆಯೊಂದಿಗೆ ಮನಸ್ಸು ಕೂಡಾ ಪ್ರಫುಲ್ಲವಾಗಿರುತ್ತದೆ. ಹಾಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು. ಮೊದಲು ನಮ್ಮ ಮನೆ, ಶಾಲೆಗಳನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛತೆಯ ಮಹತ್ವವನ್ನು ಸಾರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲ ಅವರೊಂದಿಗೆ ಕೈಗೂಡಿಸಬೇಕು ಎಂದರು.

RELATED ARTICLES  ಕಾರು ಮರಕ್ಕೆ ಡಿಕ್ಕಿ 2 ಸಾವು

ಈ ಸಂದರ್ಭದಲ್ಲಿ ಮಂಜುನಾಥ ಜನ್ನು, ರಾಜೇಶ ನಾಯಕ, ಹನೀಫ್ ಇಸ್ಮಾಯಿಲ್ ಸಾಬ್, ಕೃಷ್ಣ ಎನ್ ಗೌಡ, ಸಿ.ಆರ್.ಪಿ. ಆರ್. ಟಿ. ಗೌಡ, ಹಾಗೂ ಗ್ರಾ.ಪಂ. ಸದಸ್ಯ ಶ್ರೀನಿವಾಸ ದೇವಣ್ಣ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES  ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರದ ಸಾಹಿತ್ಯ ಸಂಘದಿಂದ ವಿಶೇಷವಾಗಿ ನಡೆಯಿತು ರಕ್ಷಾಬಂಧನ