ಕುಮಟಾ: ಹಾಲಕ್ಕಿ ಸಮಾಜದವರು ಶಿಕ್ಷಣದ ಕಡೆಗೆ ಒಲವು ತೋರಿಸಬೇಕು, ಹಿಂದುಳಿದ ವರ್ಗವೆಂಬ ಭಾವನೆಯಿಂದ ಹೊರಬರಬೇಕು ಎಂದು ಶಾಸಕಿ ಶಾರದಾ ಮೋಹನ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಶ್ರೀ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಗುಡಾಳ ಹೆರವಟ್ಟಾ ಕುಮಟಾ.ಇವರ ಆಶ್ರಯದಲ್ಲಿ ನಡೆದಂತ ಪ್ರಥಮ ವರ್ಷದ ಹಾಲಕ್ಕಿ ಸಮಾಜದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

RELATED ARTICLES  27 ಮತ್ತು 28 ರಂದು ಡೇರೆ ಮೇಳ : ಶಿರಸಿಯ ಟಿ.ಎಸ್.ಎಸ್ ಆವಾರದಲ್ಲಿ ಆಯೋಜನೆ.

ಹಾಲಕ್ಕಿ ಸಮಾಜದ ಅಭಿವೃದ್ಧಿಗೆ ಸದಾ ನಾವು ಸಹಕಾರ ನೀಡುತ್ತಿದ್ದು ಮುಂದೆಯೂ ಈ ಎಲ್ಲರ ಜೊತೆ ಇರುವುದಾಗಿ ಅವರು ಅನಿಸಿಕೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಹಾಲಕ್ಕಿ ಸಮಾಜದ ಭರತ ನಾಟ್ಯ ಕಲಾವಿಧ ಹಾಗೂ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಮಧುಸೂಧನ್ ಶೇಟ್, ಬಿಜೆಪಿ ಪ್ರಮುಖರಾದ ಸೂರಜ್ ನಾಯ್ಕ ಸೋನಿ, ಜೆಡಿಎಸ್ ಪ್ರಮುಖರಾದ ಪ್ರದೀಪ‌ ನಾಯಕ ದೇವರ ಬಾವಿ ಹಾಜರಿದ್ದರು.

RELATED ARTICLES  ಭಟ್ಕಳದಲ್ಲಿ ತಾಲೂಕಾ‌ ಕಸಾಪದಿಂದ ಸಂಸ್ಥಾಪನಾ ದಿನಾಚರಣೆ.

ಹಾಗೆ ವಾಲಿಬಾಲ್ ಪಂದ್ಯಾವಳಿಯಲ್ಲಿ
ಪ್ರಥಮ ಸ್ಥಾನ: ಶ್ರೀ ಹುಲಿದೇವ ಪ್ರಸನ್ನ ಹಟ್ಟಿಕೇರಿ ತಂಡ.ದ್ವಿತೀಯ ಸ್ಥಾನ: ಗೋಕರ್ಣ ತಂಡ.ತೃತೀಯ ಸ್ಥಾನ: ಹೊಸಳ್ಳಿ ತಂಡ.
ಚತುರ್ಥ ಸ್ಥಾನ: ದುಂಡಕುಳಿ ತಂಡವು ಬಹುಮಾನ ಪಡೆದವು.