ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೊಸ ವರ್ಷವನ್ನು ಮುಂಬೈನಲ್ಲಿ ಒಂದು ದಿನ ಮೊದಲೇ ಆಚರಿಸಿಕೊಂಡಿದ್ದಾರೆ.

ಶನಿವಾರ ರಾತ್ರಿಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ನ್ಯೂ ಇಯರ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ತಮ್ಮ ಸ್ನೇಹಿತ ಯುವರಾಜ್ ಸಿಂಗ್ ಮತ್ತು ಮುಂಬೈ ಜತೆಗಾರ ಅಜಿತ್ ಅಗರ್ಕರ್ ಅನರನ್ನು ಆಹ್ವಾನಿಸಿದ್ದರು. ಪಾರ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ಅಜಿತ್ ಅಗರ್ಕರ್ ತೆಗೆಸುಕೊಂಡಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಇನ್ಸ್ ಟಾಗ್ರಾಂ ಖಾತೆಯಲ್ಲಿ ಚಿತ್ರವನ್ನು ಪ್ರಕಟಿಸಿರುಲ ಯುವಿ, ‘’ವಂಡರ್ ಫುಲ್ ನೈಟ್ ಗಾಗಿ ಸಚಿನ್ ತೆಂಡೂಲ್ಕರ್ ಗೆ ಥ್ಯಾಂಕ್ಸ್. ತುಂಬಾ ಎಂಜಾಯ್ ಮಾಡಿದೆ’’ ಎಂದು ಬರೆದುಕೊಂಡಿದ್ದಾರೆ.

RELATED ARTICLES  ಹೇಗಿದೆ ನಿಮ್ಮ ಇಂದಿನ ರಾಶಿ ಭವಿಷ್ಯ? ನಿಮ್ಮ ಸಮಸ್ಯೆಗೆ ಸಿಗಲಿದೆಯೇ ಪರಿಹಾರ? ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಗೊತ್ತಾ?

ಚಿತ್ರದಲ್ಲಿ ಯುವಿ ಮತ್ತು ಅಗರ್ಕರ್ ಮಧ್ಯೆ ನಿಂತಿರುವ ಸಚಿನ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.