ಕುಮಟಾ: ಬಾಡ ಗ್ರಾಮದ ಬಾಲಕ ಅಭಿರಾಮ್ ಅರವಿಂದ ನಾಯ್ಕ ಕೆಬಿಐ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್‍ ಶಿಪ್‍ನಲ್ಲಿ ಬಂಗಾರ ಗೆದ್ದಿದ್ದಾನೆ ತನ್ಮೂಲಕ ದೇಶ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ.

ಹೈದರಬಾದ್ ನ ಕೋಟ್ಲಾ ವಿಜಯಭಾಸ್ಕರ್ ರೆಡ್ಡಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್‍ ಶಿಪ್‍ ನಲ್ಲಿ 9ರಿಂದ 15 ವಯಸ್ಸಿನವರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

RELATED ARTICLES  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ದಿ ಯೋಜನೆಗಳಿಂದಾಗಿ ಕನ್ನಡ ನಾಡಿಗೆ ವಿಶ್ವದಲ್ಲಿ ವಿಶಿಷ್ಠ ಸ್ಥಾನ ದೊರಕಿದೆ : ಡಿ.ಬಿ.ನಾಯ್ಕ

ಈ ಸ್ಪರ್ಧೆಯಲ್ಲಿ ಸುಮಾರು 7ರಿಂದ 8 ದೇಶಗಳು ಭಾಗವಹಿಸಿದ್ದವು. 3 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿದ್ದರು. ಆದರೆ ಕನ್ನಡದ ಬಾಲಕ ಅಭಿರಾಮ್ ಅರವಿಂದ ನಾಯ್ಕ ಸಾಧನೆಗೈದಿದ್ದಾರೆ.

RELATED ARTICLES  ಮಾಧವ ನಾಯಕರಿಗೆ ರಾಷ್ಟ್ರಭೂಷಣ ಪ್ರಶಸ್ತಿ; ಜಿಲ್ಲೆಯ ಜನರಲ್ಲಿ ಹರ್ಷ

ಅಭಿರಾಮ್ ತಂದೆ ಅರವಿಂದ ಅವರೇ ಕರಾಟೆ ಮಾಸ್ಟರ್ ಆಗಿದ್ದಾರೆ. ಇವರ ದೊಡ್ಡ ಮಗ ರಾಘವೇಂದ್ರ ಕೂಡ 16-17 ವಯಸ್ಸಿನ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಸದರಿ ಕುಮಟಾದ ಸರಸ್ವತಿ ವಿದ್ಯಾಕೇಂದ್ರದಲ್ಲಿ 7ನೇ ತರಗತಿ ಕಲಿಯುತ್ತಿರುವ ಈತ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ನಮ್ಮ ಹಾರೈಕೆ.