ಬೆಂಗಳೂರು: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಮಸೂದೆ ತರಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದ್ದು, ಇದನ್ನು ವಿರೋಧಿಸಿ, ನಾಳೆ ದೇಶಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಲಿವೆ.

RELATED ARTICLES  189 ಪ್ರಯಾಣಿಕರಿದ್ದ,ಇಂಡೋನೇಷ್ಯಾದ ಲಯನ್ ಏರ್'ಲೈನ್ಸ್ ವಿಮಾನ ಸಮುದ್ರದಲ್ಲಿ ಪತನ.

ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ಮಾಡಲು ನಿರ್ಧರಿಸದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದ ವಿರುದ್ಧ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತವಾಗಲಿದ್ದು, ತುರ್ತು ಸೇವೆ ಮಾತ್ರ ಲಭ್ಯವಿರಲಿದೆ.

RELATED ARTICLES  ನಾಗರಾಜ ನಾಯಕರ 'ಬೆಳಕಿನತ್ತ ಜನತೆಯ ಚಿತ್ತ'.

ಅದಲ್ಲದೇ ಈ ಕುರಿತು ಚರ್ಚಿಸಲು ದೆಹಲಿಗೆ ತೆರಳಿರುವ ಭಾರತೀಯ ವೈದ್ಯಕೀಯ ಸಂಘ, ರಾಷ್ಟ್ರೀಯ ವೈದ್ಯಕೀಯ ಆಯೋಗ ವಿರುದ್ಧ ವಿರೋಧಿಸಲು ನಿರ್ಧಾರ ಕೈಗೊಂಡಿದೆ ಎಂದು, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಹೆಚ್.ಎನ್.ರವೀಂದ್ರ ತಿಳಿಸಿದ್ದಾರೆ.