ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರಿಯಾ ಹವ್ಯಕ ಮಂಡಲ ಸಮಾವೇಶವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸಮಾವೇಶಗೊಂಡಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯದರ್ಶಿ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

IMG 20180101 WA0008
ಬಳಿಕ ವ್ಯವಸ್ತಿತವಾಗಿ ವಿವಿಧ ವಿಭಾಗಗಳ ಸಭೆಗಳು ಜರಗಿದವು. ಮಹಾಮಂಡಲ ಪದಾಧಿಕಾರಿಗಳಾದ ಅಂಬಿಕಾ, ಮುಷ್ಥಿ ಭಿಕ್ಷಾ ಪ್ರಧಾನೆ ಮಲ್ಲಿಕಾ, ಶಿಷ್ಯ ಮಾಧ್ಯಮ ಪ್ರಧಾನ ಪ್ರವೀಣ್ ಎಸ್ ಭೀಮನಕೋಣೆ, ಕೃಷಿ ಪ್ರಧಾನ ಭಾಸ್ಕರ ರಾಮಚಂದ್ರ ಹೆಗಡೆ, ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮುಳ್ಳೇರ್ಯ ಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಮಹೇಶ್ ಸರಳಿ, ವೃತ್ತಿಪರ ವಿಭಾಗ ಪ್ರಧಾನ ವೈ ಕೆ ಗೋವಿಂದ ಭಟ್ , ಜೀವಿಕಾ ಪ್ರಧಾನ ಸತ್ಯಶಂಕರ ಭಟ್, ವೈದಿಕ ಪ್ರಧಾನ ಕೇಶವ ಮಾಡಾವು, ಸಂಸ್ಕಾರ ಪ್ರಧಾನ ನವನೀತಪ್ರಿಯ ಕೈಪ್ಪಂಗಳ, ವಿದ್ಯಾರ್ಥಿ ವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಮಾತೃ ಪ್ರಧಾನೆ ಕುಸುಮಾ ಪೆರುಮುಖ, ಮುಷ್ಥಿ ಭಿಕ್ಷಾ ಪ್ರಧಾನೆ ಗೀತಾಲಕ್ಷ್ಮಿ, ಸಹಾಯ ಪ್ರಧಾನ ಡಾ ಡಿ ಪಿ ಭಟ್ , ಉಲ್ಲೇಖ ಪ್ರಧಾನ ಕೃಷ್ಣ ಮೋಹನ ಎಡನಾಡು, ಇವರು ಆಯಾ ವಿಭಾಗಗಳ ಬಗ್ಗೆ ಸಭಾ ನಿರ್ವಹಣೆ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಮಾರ್ಗದರ್ಶನಗಳನ್ನಿತ್ತರು.
ಬಳಿಕ ಜರಗಿದ ಸಮಗ್ರ ಸಭೆಯಲ್ಲಿ ಮಹಾ ಮಂಡಲ ಕಾರ್ಯದರ್ಶಿ ಹರಿಪ್ರಸಾದ ಪೆರಿಯಾಪು ಅವರು ಸಂಘಟನಾತ್ಮಕ ಕಾರ್ಯಯೋಜನೆಗಳ ಬಗ್ಗೆ ವಿವರಣೆಗಳನ್ನಿತ್ತು ಚಂದ್ರಮೌಳೀಶ್ವರ ದೇವಾಲಯ, ಅಭಯಾಕ್ಷರ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿದರು.
ಮಹಾ ಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅಧ್ಯಕ್ಷೀಯ ಭಾಷಣ ಮಾಡಿದರು. ಮಂಡಲ ಅಧ್ಯಕ್ಷ ಪ್ರೊ ಶ್ರೀಕೃಷ್ಣ ಭಟ್ ಶುಭಾಶಂಸನೆಯಿತ್ತರು.
ಮಂಡಲ ಪದಾಧಿಕಾರಿಗಳಾದ ಸತ್ಯನಾರಾಯಣ ಭಟ್ ಮೊಗ್ರ, ಶ್ರೀಕೃಷ್ಣ ಭಟ್ ಮೀನಗದ್ದೆ , ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ , ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ದೇವಕಿ ಪನ್ನೆ, ಪತ್ತಡ್ಕ ಗಣಪತಿ ಭಟ್ ಮತ್ತು ವಲಯ ಪದಾಧಿಕಾರಿಗಳು ಗುರಿಕ್ಕಾರರು ಉಪಸ್ತಿತರಿದ್ದರು
ಮಂಡಲ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ , ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ದೇವಕಿ ಪನ್ನೆ, ಪತ್ತಡ್ಕ ಗಣಪತಿ ಭಟ್ ಮತ್ತು ವಲಯ ಪದಾಧಿಕಾರಿಗಳು ಗುರಿಕ್ಕಾರರು ಉಪಸ್ತಿತರಿದ್ದರು
~
ಮಂಗಳೂರು ಹವ್ಯಕ ಮಂಡಲ ವೈದಿಕ ಪ್ರಧಾನ ವೇ ಮೂ ಶಿವಪ್ರಸಾದ ಭಟ್ ಅಮೈ ಇವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಮಂಡಲದ ವತಿಯಿಂದ ಖಂಡಿಸಲಾಯಿತು. ಈ ಬಗ್ಗೆ ಸೂಕ್ತವಾದ ಕಾನೂನುಕ್ರಮ ಜರಗಿಸಲು ಮುಳ್ಳೇರ್ಯ ಹವ್ಯಕ ಮಂಡಲ ಸಭೆಯಲ್ಲಿ ಆಗ್ರಹಪಡಿಸಲಾದ ಠರಾವನ್ನು ಮಂಡಿಸಿ ಅಂಗೀಕರಿಸಲಾಯಿತು.

RELATED ARTICLES  ಈಶಾನ್ಯ ರಾಜ್ಯಗಳಲ್ಲಿ ಹಬ್ಬಿದ ಬಿ ಜೆ ಪಿ ನೆಲೆ.