ಬೆಂಗಳೂರು: ನಾವೂ ಹಿಂದುಗಳೇ, ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗೋದು ಸಹಜ. ರಾಮ, ಹನುಮಜಯಂತಿಯನ್ನು ಎಲ್ಲರೂ ಆಚರಿಸ್ತಾರೆ, ಬಿಜೆಪಿಯವರು ಮಾತ್ರವಲ್ಲ ಎಂದು, ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಕೋಮುಗಲಭೆಯಲ್ಲಿ 22 ಜನ ಹಿಂದೂಗಳ ಹತ್ಯೆ ಆಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅವರಲ್ಲಿ 8ಕ್ಕೂ ಹೆಚ್ಚು ಜನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಿಂದುಗಳ ನಡುವೆ ನಡೆದ ಗಲಾಟೆಯಲ್ಲೇ ಮೃತಪಟ್ಟಿದ್ದಾರೆ, ಇದನ್ನು ಬಿಜೆಪಿಯವರು ಹೇಳಲ್ಲ ಎಂದಿದ್ದಾರೆ. ಪರೇಶ್ ಮೇಸ್ತ ಸಾವಿನ ತನಿಖೆಯನ್ನು ಸಿಬಿಐ ಮಾಡುತ್ತಿದೆ, ಅದಕ್ಕೆ ಬೇಕಾದ ಸಹಕಾರ ಕೊಡುತ್ತೇವೆ ಎಂದು ಹೇಳಿದ್ದಾರೆ.

RELATED ARTICLES  ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಖಚಿತ.

ಹಿಂದುತ್ವದ ಗುತ್ತಿಗೆಯನ್ನು ಯಾರು ಪಡೆದಿಲ್ಲ. ನಾವು ಹಿಂದೂ ಧರ್ಮವನ್ನು ಶ್ರದ್ಧೆಯಿಂದ ಆಚರಿಸುತ್ತೇವೆ, ಕೇವಲ ರಾಜಕೀಯ ಕಾರಣಕ್ಕಾಗಿ ಅವರು ಹಿಂದುತ್ವವನ್ನು ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆ ಬರ್ತಿದೆ ಎಂದು ಬಿಜೆಪಿ ಯವರು ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿಕೆಗೆ ಗೃಹ ಸಚಿವರು ತಿರುಗೇಟು ನೀಡಿದರು.

RELATED ARTICLES  ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ