ಇವತ್ತಿನ ಸಿಟಿ ಲೈಫ್ ಅಂದ್ರೇನೇ ಟೆನ್ಶನ್. ಅದ್ರಲ್ಲೂ ಮಹಿಳೆಯರಿಗೆ ಇನ್ನಷ್ಟು ಒತ್ತಡ ಜಾಸ್ತಿ. ಮನೆ, ಕೆಲಸ, ಗಂಡ, ಮಕ್ಕಳು, ಅಡುಗೆ, ಕುಟುಂಬದ ಬೇಕು-ಬೇಡ ಜೊತೆಗೆ ಮಹಾನಗರಗಳ ಟ್ರಾಫಿಕ್ಕು ಹೀಗೆ ನೂರಾರು ಟೆನ್ಶನ್ ಅವರಿಗೆ. ಇದರಿಂದ ಮೆದುಳಿಗೆ ಒತ್ತಡ ಹೆಚ್ಚಾಗುತ್ತದೆ, ಆದರೆ ನೆನಪಿರಲಿ.. ಇದೇ ಎಲ್ಲ ಆರೋಗ್ಯ ಸಮಸ್ಯೆಗಳ ಮೂಲ.

ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾದ ಎಂದಾದರೆ ಆತನಿಗೆ ಖಾಯಿಲೆಗಳು ಬೆನ್ನತ್ತಿ ಬರುತ್ತವೆ. ಅದರಲ್ಲೂ ಮಹಿಳೆಯರಿಗೆ ಹಾರ್ಮೋನ್ ಅಸಮತೋಲನದ ಸಮಸ್ಯೆ ಬಹುವಾಗಿ ಕಾಡುತ್ತದೆ. ಒಮ್ಮೆ ಹಾರ್ಮೋನು ಅಸಮತೋಲನ ಶುರುವಾಯಿತು ಎಂದಾದರೆ ಅದರಿಂದಾಗಿಯೇ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಶುರುವಾಗತೊಡಗುತ್ತವೆ. ಹಾಗಿದ್ರೆ ಇಷ್ಟೊಂದು ಕೆಲಸಗಳನ್ನು ಮುಂದಿಟ್ಟುಕೊಂಡು ಮಹಿಳೆ ಒತ್ತಡ ರಹಿತ ಜೀವನ ನಡೆಸೋಕೆ ಸಾಧ್ಯವೇ? ಖಂಡಿತಾ ಸಾಧ್ಯವಿದೆ. ಧ್ಯಾನ, ಪ್ರಾಣಾಯಾಮ, ಯೋಗದ ಜೊತೆಗೆ ಒಳ್ಳೆಯ ಆಹಾರವನ್ನು ಆಕೆ ಸೇವಿಸಿದಲ್ಲಿ ಮಹಿಳೆ ಮಾನಸಿಕ ಒತ್ತಡದಿಂದ ಹೊರಬರಲು ಅಥವಾ ಅದನ್ನು ಎದುರಿಸಲು ಸಾಧ್ಯವಿದೆ.

RELATED ARTICLES  ನಿಮಗೆ ನಿದ್ರಾಹೀನತೆಯೇ? ಇಲ್ಲಿದೆ ನೈಸರ್ಗಿಕ ವಿಧಾನ.

ಅನೇಕ ಮಹಿಳೆಯರು ಕೆಲಸದ ಒತ್ತಡದಲ್ಲಿ ಆಹಾರ ಸೇವಿಸೋದೇ ಮರೀತಾರೆ. ಇದೇ ಅವರು ಮಾಡುವ ಮೊದಲ ತಪ್ಪು. ಒಳ್ಳೆಯ ಪೋಷ್ಠಿಕಾಂಶಗಳುಳ್ಳ ಆಹಾರ ಸೇವಿಸಿದರೆ ಶರೀರಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಆರೋಗ್ಯಕರ ಡಯಟ್ ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತೆ ಇತ್ತೀಚಿನ ಸಂಶೋಧನೆ.

RELATED ARTICLES  'ಅಡುಗೆಮನೆಯಲ್ಲಿ 'ಮಸಾಲೆ'ಯಾಗಿ, ಒಂದೇ ಅಲ್ಲ,ಔಷಧಿ'ಯಾಗಿಯೂ ಬಳಸಬಹುದು ಈ ಜಾಯಿಕಾಯಿ..!!

ಆಸ್ಟ್ರೇಲಿಯದ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ತಿನ್ನುವ ಮಹಿಳೆಯರಲ್ಲಿ ಮಾನಸಿಕ ಒತ್ತಡದ ಪ್ರಮಾಣ ಶೇ.23 ರಷ್ಟು ಕಡಿಮೆಯಂತೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಹಾಗೂ ತರಕಾರಿ ಸೇವನೆ ಅತ್ಯಗತ್ಯ. ಇದು ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ.. ಪುರುಷರಿಗೂ ಅನ್ವಯವಾಗುತ್ತದೆ. ಹಾಗಿದ್ರೆ ಇನ್ಯಾಕೆ ತಡ.. ನೀವು ಸೇವಿಸೋ ಆಹಾರದಲ್ಲಿ ಹೆಚ್ಚು ಹೆಚ್ಚಾಗಿ ಹಣ್ಣುಗಳನ್ನು ಬಳಸಿ.. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.