ಮುಂಡಗೋಡ: ಮಂಗಳೂರಲ್ಲಿ ನಡೆಯುವ ಜೆಡಿಎಸ್ ನಡಿಗೆ ಸೌಹಾರ್ದತೆಯ ಕಡೆಗೆ ಕಾರ್ಯಕ್ರಮಕ್ಕೆ ಯಲ್ಲಾಪುರ ಕ್ಷೇತ್ರದಿಂದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಹೊರಡಲಿದ್ದಾರೆ ಎಂದು ರಾಜ್ಯ ರೈತ ಯುವಮೋರ್ಚಾ ಕಾರ್ಯದರ್ಶಿ ಸಂತೋಷ ರಾಯ್ಕರ ತಿಳಿಸಿದರು.

ಜನವರಿ 9ರಂದು ನಡೆಯಲಿರುವ ಜೆಡಿಎಸ್ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರಾಜ್ಯ ಪ್ರಧಾನಕಾರ್ಯದರ್ಶಿ ಬಿ.ಎಫ್.ಫಾರೂಖಿ ಸೇರಿದಂತೆ ಪಕ್ಷದ ಗಣ್ಯರು ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಜೆಇಎಸ್ ಪಕ್ಷವು ಬಲಿಷ್ಠವಾಗಿದೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯವಿರುವುದು ಸಹಜ, ಅದೆನಲ್ಲಾ ನಾವು ಪಕ್ಷದ ಚೌಕಟ್ಟಿನಲ್ಲಿ ಪರಹರಿಸಿಕೊಳ್ಳುತ್ತೇವೆ ಎಂದರು. ಪಕ್ಷದ ಕಾರ್ಯಚಟುವಟಿಕೆಗಳಿಗಾಗಿ ಪಕ್ಷದ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

RELATED ARTICLES  ಹಿರೇಗುತ್ತಿ ಸೊಸೈಟಿಯಲ್ಲಿ ಆಶಾಕಾರ್ಯಕರ್ತೆಯರಿಗೆ ಸನ್ಮಾನ.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮುನಾಫ ಮಿರ್ಜಾನಕರ, ಜಿಲ್ಲಾ ರೈತ ಯುವ ಮೋರ್ಚಾ ಅಧ್ಯಕ್ಷ ತುಕಾರಾಮ ಗುಡ್ಕರ, ತಾಲೂಕಾ ಕಾರ್ಯಾಧ್ಯಕ್ಷ ಮುತ್ತು ಸಂಗೂರಮಠ, ಸಿ.ಎಮ್.ನಾಡಿಗೇರ, ಬಂಜಾರ ಸಮಾಜದ ಲಕ್ಷ್ಮಣ ಚಂದಾಪುರ. ಬಾಬಾಜಾನ ಗೋಣೂರ, ಪ್ರಕಾಶ ಚಂದಾಪುರ, ನಾಗರಾಜ ತಳವಾರ, ಮಳಗಿಕರ ಸೇರಿದಂತೆ ಮುಂತಾದವರು ಇದ್ದರು.

RELATED ARTICLES  ಗೋಕರ್ಣದಲ್ಲಿ ಶಿಷ್ಯರನ್ನು ಹರಸಿದ ರಾಘವೇಶ್ವರ ಶ್ರೀ.