ಪಾಕಿಸ್ತಾನ ಭಾರತಕ್ಕೆ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ಕೊಡುತ್ತಿರುವ ಕಿರುಕುಳದ ಕಾರಣದಿಂದ ಆ ದೇಶದ ಜೊತೆ ಕ್ರಿಕೆಟ್ ಸರಣಿ ನಡೆಸುವುದು ಅಸಾಧ್ಯ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಮಾಲೋಚನಾ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು ‘ಪಾಕಿಸ್ತಾನ ಇತ್ತೀಚೆಗೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಯೋಧರನ್ನು ಹತ್ಯೆ ಮಾಡುತ್ತಿದೆ. ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಮೂಲಕ ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಕುಲಭೂಷಣ್ ಜಾಧವ್ ಕುಟುಂಬಕ್ಕೆ ಮಾಡಿದ ಅಪಮಾನ ಇಂತಹ ಎಲ್ಲಾ ಕುಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಸರಣಿ ನಡೆಸಲು ಇದು ಸಕಾಲವಲ್ಲ’ ಎಂದಿದ್ದಾರೆ.

RELATED ARTICLES  ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನಕ್ಕೆ ಸಂಬಂಧಿಸಿ ಪ್ರಕರಣ ದಾಖಲು!

‘ನಿಯಮ ಉಲ್ಲಂಘಿಸಿ ಆ ದೇಶವು ಗಡಿಯಾಚೆಯಿಂದ ಗುಂಡಿನ ದಾಳಿ ಮುಂದುವರಿಸಿದೆ. ಸನ್ನಿವೇಶ ಹೀಗಿರುವುದರಿಂದ ಆ ದೇಶದೊಂದಿಗೆ ಸ್ನೇಹ ಸಂಬಂಧ ಮುಂದುವರಿಸುವುದಾಗಲಿ ಅಥವಾ ಸೌಹಾರ್ದಯುತ ಕ್ರೀಡೆಗಳನ್ನು ಆಯೋಜಿಸಲು ವಾತಾವರಣ ಪೂರಕವಾಗಿಲ್ಲ’ ಎಂದು ಸುಷ್ಮಾ ಹೇಳಿದ್ದಾರೆ.

RELATED ARTICLES  ಆತ್ಮಹತ್ಯೆಗೆ ಶರಣಾದ ಹೋಮ್ ಗಾರ್ಡ: ವೈರಲ್ ಆಯ್ತು ದ್ರಶ್ಯ!

‘ಮಹಿಳೆಯರು, 70 ವರ್ಷ ವಯಸ್ಸು ಮೀರಿದವರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಮುಂದಾಗಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಸುಳಿವು ನೀಡಿದ್ದು, ಇದು ಕೇವಲ ಮಾನವೀಯ ನೆಲೆಯಲ್ಲಿ ಅಷ್ಟೇ’ ಎಂದು ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.