ಕನ್ನಡದಲ್ಲಿ ಭಾರೀ ನಿರೀಕ್ಷೆಗಳನ್ನುಂಟು ಮಾಡಿರುವ ಚಿತ್ರ ‘ಕುರುಕ್ಷೇತ್ರ’. ಈ ಚಿತ್ರದ ಒಂದೊಂದೇ ಪಾತ್ರವರ್ಗವನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಾ ಚಿತ್ರದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ಇತ್ತೀಚೆಗಷ್ಟೇ ‘ದರ್ಶನ್’ ಅವರ ದುರ್ಯೋಧನನ ಗೆಟಪ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಇನ್ನೊಂದು ಪ್ರಮುಖ ಪಾತ್ರದ ಲುಕ್ ಬಹಿರಂಗಪಡಿಸಿದೆ.

ಕನ್ನಡದ ಕ್ರೇಜಿಸ್ಟಾರ್, ಪ್ರೇಮಲೋಕದ ಕತೃ ಎಂದೇ ಕರೆಯಲ್ಪಡುವ ರವಿಚಂದ್ರನ್ ಅವರು ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಮಿಂಚಿದ್ದಾರೆ. ಅವರು ಈ ಚಿತ್ರದಲ್ಲಿ ‘ಶ್ರೀಕೃಷ್ಣ’ನ ಪಾತ್ರ ಮಾಡಿದ್ದು, ಅವರ ಲುಕ್ ಕನ್ನಡ ಚಿತ್ರರಂಗ, ಅಭಿಮಾನಿಗಳನ್ನು ಸಂಪೂರ್ಣವಾಗಿ ಮೋಡಿ ಮಾಡಿದೆ.

RELATED ARTICLES  ದಿನಾಂಕ 02/07/2019 ರ ರಾಶಿ ಭವಿಷ್ಯ ಇಲ್ಲಿದೆ.

ಅಂತರ್ಜಾಲದಲ್ಲಿ ಕೃಷ್ಣನ ಅವತಾರ ವೈರಲ್ ಆಗಿದ್ದು ಪಾತ್ರಕ್ಕಾಗಿ ಸ್ಯಾಂಡಲ್ ವುಡ್ ನ ರವಿಮಾಮ ಅದೆಷ್ಟು ತಯಾರಿ ಮಾಡಿಕೊಂಡಿದ್ದಾರೆ ಎನ್ನುವುದು ಈ ಫೋಟೋ ನೋಡಿದರೆ ಗೊತ್ತಾಗುತ್ತದೆ. ಯಾರೂ ಊಹಿಸಲಾರದ ರೀತಿಯಲ್ಲಿ ಕ್ರೇಜಿಸ್ಟಾರ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ಣನ ಫಸ್ಟ್ ಲುಕ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ರವಿಚಂದ್ರನ್ ಪುತ್ರ ಮನೋರಂಜನ್ “ಶ್ರೀ ಕೃಷ್ಣನ ಪಾತ್ರದಲ್ಲಿರುವ ನನ್ನ ತಂದೆ ದೇವರು” ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.

RELATED ARTICLES  ಹಾಡು ಹಗಲೇ ಅಂಗಡಿ ಕಳುವು ! ಲಕ್ಷಾಂತರ ರೂ ಲಪಟಾಯಿಸಿದ ಕಳ್ಳರು.

ದರ್ಶನ್ ಅವರ 50ನೇ ಚಿತ್ರವಾಗಿರುವ ‘ಕುರುಕ್ಷೇತ್ರ’ದಲ್ಲಿ ಚಾಲೆಂಜಿಂಗ್ ಸ್ಟಾರ್ ಚಿತ್ರದಲ್ಲಿ ದುರ್ಯೋಧನನಾಗಿ ಕಾಣಿಸಿಕೊಂಡರೆ, ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಗೌಡ, ಕರ್ಣನಾಗಿ ಅರ್ಜುನ್ ಸರ್ಜಾ, ಭೀಷ್ಮನಾಗಿ ರೆಬೆಲ್ ಸ್ಟಾರ್ ಅಂಬರೀಶ್ ಪಾತ್ರಪೋಷಣೆ ಮಾಡಿದ್ದಾರೆ.