ಶಿರಸಿ: ಸೇವಾಕಾರ್ಯ ಪರಮ ಶ್ರೇಷ್ಠವಾದದ್ದು. ಅದು ಅತ್ಯಂತ ಮಹತ್ವಪೂರ್ಣವಾದುದು ಹಾಗೂ ಅತ್ಯಂತ ಸೂಕ್ಷ್ಮವಾದುದು ಕೂಡ. ಈ ನಿಸ್ವಾರ್ಥ ಸೇವೆಗೂ ಭಗವಂತ ಭಗವದ್ಗೀತೆಯಲ್ಲಿ ಹೇಳಿದ ಕರ್ಮಯೋಗಕ್ಕೂ ಯಾವುದೇ ಅಂತರವಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.

ಅವರು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಮೀಪದ ಯಾತ್ರಿನಿವಾಸದಲ್ಲಿ ಬೆಂಗಳೂರಿನ ಸಂಸ್ಕøತ ವಿಶ್ವವಿದ್ಯಾಲಯ ಹಾಗೂ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ರಾಷ್ಟ್ರಿಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಏಳು ದಿನದ ವಿಶೇಷ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವಾಕಾರ್ಯ ದೊಡ್ಡದು. ಕರ್ಮಯೋಗದ ಮರ್ಮವೂ ಇದೇ ಆಗಿದೆ. ಮಾಡುವ ಕೆಲಸದಲ್ಲಿ ಆನಂದಪಡಬೇಕು, ಆಸಕ್ತಿ ತೋರಬೇಕು. ಆಲಸ್ಯದಲ್ಲಲ್ಲ. ಕೆಲಸ-ಕಾರ್ಯಗಳಿಂದ ಶಾರೀರಿಕವಾದ ಆರೋಗ್ಯ, ಮಾನಸಿಕವಾದ ಸ್ವಾಸ್ಥ್ಯ-ಉತ್ಸಾಹ ಹಾಗೂ ಬೌದ್ಧಿಕವಾದ ವಿಕಾಸ ಸಿದ್ಧಿಸುತ್ತದೆ ಎಂದರು.
ಕೆಲವೊಮ್ಮೆ ರಜಾದಿನಗಳು ಬಂದಾಗ ಸಂತೋಷ ಪಡುತ್ತಾರೆ. ಅಂದರೆ ನಿಷ್ಕ್ರಿಯತೆಯಲ್ಲಿ ಸಂತೋಷ, ಇದು ಸರಿಯಲ್ಲ. ಕ್ರಿಯಲ್ಲಿ ಅಂದರೆ ಕೆಲಸದಲ್ಲಿ ಸಂತೋಷ ಪಡಬೇಕು ಎಂದರು.

RELATED ARTICLES  ಸರಕಾರದ ವಿವಿಧ ಧೋರಣೆ ಖಂಡಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಕೆ

ಸ್ವಾರ್ಥವನ್ನು ಮಾತ್ರ ಬಯಸದೆ, ಫಲಾಪೇಕ್ಷೆಯನ್ನು ಬಿಟ್ಟು ಸೇವಾರೂಪದಲ್ಲಿ ಎಲ್ಲರಿಗಾಗಿ, ಸಮಗ್ರ ದೇಶದ ಅಭಿವೃದ್ಧಿಗಾಗಿ ಸೇವಾಕಾರ್ಯದಲ್ಲಿ ತೊಡಗಿಕೊಂಡರೆ ನಮ್ಮೊಳಗೆ ಸಮರ್ಪಣಾ ಭಾವನೆಯೇ ಮುಂತಾದ ಸದ್ಭಾವನೆಗಳು ಬೆಳೆಯುತ್ತವೆ. ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಅಂದರೆ ಸ್ವಾರ್ಥ-ಪರಾರ್ಥಗಳು ಸಿದ್ಧಿಸುತ್ತವೆ. ಆದ್ದರಿಂದ ದೇಶದ ಅಭಿವೃದ್ಧಿಗಾಗಿ ಎಲ್ಲರೂ ಈ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಎಚ್ಚರಿಸಿರು.

ಎಂಇಎಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಜಿ. ಟಿ. ಭಟ್ಟ, ರಾಷ್ಟ್ರದ ಸಮಸ್ಯೆಗಳಿಗೆ ಸ್ಪಂದಿಸಿ, ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸುವುದೇ ಎನ್.ಎಸ್.ಎಸ್.ನ ಮೂಲ ಉದ್ದೇಶವಾಗಿದೆ. ಇದು ಮಹಾತ್ಮಾ ಗಾಂಧಿಜಿಯವರ ಕನಸು. ಈ ಉದ್ದೇಶವನ್ನು ಈಡೇರಿಸುವುದಕ್ಕೆ ಬಾಹುಬಲ, ಮನೋಬಲ, ಬುದ್ಧಿಬಲವುಳ್ಳ ಯುವಕರಿಂದ ಮಾತ್ರ ಸಾಧ್ಯ ಎಂದರು.

RELATED ARTICLES  ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇನ್ನಷ್ಟು ಬಲಗೊಳ್ಳಲಿದೆ : ಚಂದ್ರಶೇಖರ್ ಗೌಡ ವಡಗೇರಿ

ಸಂಸ್ಥಾನದ ಆಡಳಿತಮಂಡಳಿಯ ಅಧ್ಯಕ್ಷ ವಿ. ಎನ್. ಹೆಗಡೆ ಬೊಮ್ನಳ್ಳಿ, ಹುಟ್ಟಿದ ಪ್ರತಿಯೊಬ್ಬನ ಹಿಂದೆ ಸಮಾಜದ ಋಣ ಇದ್ದೇ ಇರುತ್ತದೆ. ಅದನ್ನು ನಾವು ದೇಶಸೇವೆಯ ಮೂಲಕ ತೀರಿಸಬೇಕು ಎಂದರು.

ಸಭೆಯಲ್ಲಿ ಸೋಂದಾ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಭಂಡಾರಿ, ರಾಜರಾಜೇಶ್ವರಿ ಸಂಸ್ಕøತ ಕಾಲೇಜಿನ ಪ್ರಾಂಶುಪಾಲ ವಿ. ನರಸಿಂಹ ಭಟ್ಟ, ಉಪಸ್ಥಿತರಿದ್ದರು. ಬಳಿಕ ವಿನಾಯಕ ಮುತ್ಮುರ್ಡು ದಾಸವಾಣಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.