ಕುಮಟಾ: ವಿದ್ಯಾರ್ಥಿಗಳಾದವರು ಮೊಬೈಲ್, ಟಿವಿ ಧಾರಾವಾಹಿಗಳಿಂದ ದೂರವಿರಬೇಕು. ಸತತಾಭ್ಯಾಸ ಏಕಾಗ್ರತೆಯನ್ನು ನೀಡುತ್ತದೆ. ಮುಖ್ಯವಾಗಿ ಮಾತಾ ಪಿತರು ಮತ್ತು ಶಿಕ್ಷಕರನ್ನು ಗೌರವಿಸಿದಾಗ ಮಾತ್ರ ಜೀವನದಲ್ಲಿ ಉತ್ತುಂಗ ಸ್ಥಾನಕ್ಕೇರಬಹುದೆಂದು ಎಂದು ಖ್ಯಾತ ಶಿವಮೊಗ್ಗದ ವಿದ್ವಾಟಿಜಿ ಜಿ.ಎಸ್.ನಟೇಶ ಸೂಕ್ತ ಉದಾಹರಣೆಗೊಂದಿಗೆ ವಿದ್ಯಾರ್ಥಿಗಳನ್ನು ಓದುವಿಕೆ ಕ್ರಿಯೆಗೆ ಹುರಿದುಂಬಿಸಿ ಮಾತನಾಡಿದರು.

RELATED ARTICLES  ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುವ ಸಮಯದಲ್ಲಿ ಏಕಾಏಕಿ ಮೈಮೇಲೆ ಎರಗಿದ ಚಿರತೆ..!

ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ ಮೌಲ್ಯ ಶಿಕ್ಷಣದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ವಿದ್ಯಾರ್ಜನೆ ಸಹಾಯಕವಾಗುವ ಇಂತಹ ಉಪನ್ಯಾಸಗಳು ಬದುಕಿನ ದಿಕ್ಕನ್ನೇ ಬದಲಿಸಬಲ್ಲದೆಂದರು.

ಪ್ರಾರಂಭದಲ್ಲಿ ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿದರು. ಶಿಕ್ಷಕ ಸುರೇಶ ಪೈ ಪರಿಚಯಿಸಿದರು. ಈ ಸಂದರ್ಭದಲ್ಲಿ ಕೆನರಾ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಎಸ್.ಎನ್.ಪ್ರಭು, ವಿಚಾರವಾದಿ ಶಿವಮೊಗ್ಗದ ಸುಬ್ಬಣ್ಣ ಉಪಸ್ಥಿತರಿದ್ದರು.

RELATED ARTICLES  ಪುರಾಣ ಪ್ರಸಿದ್ದ ಶ್ರೀ ಉಪ್ಪಲೆ ಮಹಾಲಿಂಗೇಶ್ವರ ದೇವರ ಮಹಾ ರಥೋತ್ಸವ ಸಂಪನ್ನ.

ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಜಿ.ಎಸ್.ನಟೇಶ ಅವರನ್ನು ಗೌರವಿಸಿದರು.