ಕಾರವಾರ: ಉ.ಕ ಜಿಲ್ಲಾ ಗ್ರಂಥಾಲಯವು 2017 ಸಾಲಿನಲ್ಲಿ ಪ್ರಥಮ ಬಾರಿಗೆ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಆಹ್ವಾನಿಸಿದೆ.

ಜನೇವರಿ 2016 ರಿಂದ ಡಿಸೆಂಬರ 31 2017 ರವರೆಗಿನ ಕನ್ನಡ ಇಂಗ್ಲೀಷ, ಮತ್ತು ಇತರೆ ಭಾಷೆಗಳನ್ನನೋಳಗೊಂಡ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಪ್ರವಾಸ ಸಾಹಿತ್ಯ, ಆತ್ಮ ಚರಿತ್ರೆ, ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ವಿಮರ್ಶೆ, ನಾಟಕ ಹಾಗೂ ಕವನ ಸಾಹಿತ್ಯ, ಪಠ್ಯಪುಸ್ತಕ, ಮತ್ತು ಸಾಂದರ್ಬಿಕ, ಗ್ರಂಥ ಪ್ರಕಾರಗಳಿಗೆ ಸಂಬಂದಿಸಿದ ಪುಸ್ತಕಗಳನ್ನು ನಿಯಾನುಸಾರ ಖರೀದಿಸಲಾಗುವುದು.

RELATED ARTICLES  ನಾಳೆ ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ.

ಆಸಕ್ತ ಲೇಖಕರು ಹಾಗೂ ಪ್ರಕಾಶಕರು ತಮ್ಮ ಪುಸ್ತಕದ ಪ್ರತಿಯೊಂದಿಗೆ ಪುಸ್ತಕದ ಶೀರ್ಷಕೆ, ಲೇಖಕರ ಹೆಸರು ಮತ್ತು ವಿಳಾಸ, ಪ್ರಕಾಶಕರು, ಪ್ರಕಟಗೊಂಡ ವರ್ಷ, ಮುದ್ರಣದ ವಿವಿರ (ಫಾಂಟ), ಪುಸ್ತಕದ ಆಕಾರ (ಸೈಜ್), ಮತ್ತು ಬೈಂಡಿಂಗ್ ವಿವಿರಗಳೊಂದಿಗೆ ಜನೇವರಿ 30 ರೊಳಗೆ ಸಲ್ಲಿಸಬೇಕು.

RELATED ARTICLES  ಕಾರು ಮಾರಾಟ ಪ್ರತಿನಿಧಿಗಳ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಾರವಾರ ಉ.ಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.