ಹೊನ್ನಾವರ : ತಾಲೂಕಿನ ಚಂದಾವರ ಗ್ರಾಮ ಪಂಚಾಯತ ವ್ಯಾಪ್ತಿಯ ಹೂವಿನಹಿತ್ಲ ಪ್ರದೇಶದ ಕ್ರಿಶ್ಚನ್ ಕೇರಿಗೆ ಹೋಗುವ ರಸ್ತೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಾನಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಕುಮಟಾ & ಹೊನ್ನಾವರ ವಿಧಾನಸಾಭಾ ಕ್ಷೇತ್ರದ ಶಾಸಕರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಚಾಲನೆ ನೀಡಿದರು.

RELATED ARTICLES  ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರ ನಡೆಸಲು ಬರ್ತಾರಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಸದರಿ ಪ್ರದೇಶದಲ್ಲಿ ಮಳೆಗಾಲದ ವೇಳೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಜನರು ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ ಈಗಾಗಲೇ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಹತ್ತು ಲಕ್ಷ ವೆಚ್ಚದಲ್ಲಿ ಪುಟ್ ಬ್ರಿಡ್ಜ ನಿರ್ಮಾಣವಾಗಿದ್ದು ಮುಂದುವರೆದ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿ ಇಲ್ಲಿನ ಜನರ ಬಹುದಿನಗಳ ಬೇಡಿಕೆಯನ್ನು ಪೂರೈಸಿದಕ್ಕೆ ಸ್ಥಳೀಯರು ಶಾಸಕರನ್ನು ಅಭಿನಂದಿಸಿದರು.

RELATED ARTICLES  ಲಾರಿಯಲ್ಲಿ ಅಕ್ರಮ ಸಾಗಾಟ : 5,250 ಲೀಟರ್ ಮದ್ಯಸಾರ ವಶ

ಈ ಸಂದರ್ಭದಲ್ಲಿ ಪ್ರಮುಖರಾದ ವಿನಾಯಕ ಶೆಟ್ಟಿ,ಊರಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.