ಕುಮಟಾ : ತಾಲೂಕಿನ ಹೊಲನಗದ್ದೆಯ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ವತಿಯಿಂದ 18ನೇ ವರ್ಷದ ವಿಶೇಷ ಮಹಾಪೂಜೆ , ಸಾಂಸ್ಕ್ರತಿಕ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮವನ್ನು ಎಮ್.ಆರ್. ಹೆಗಡೆ ಹೊಲನಗÀದ್ದೆ ಅವರು ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಇಲ್ಲಿ ಅತ್ಯಂತ ಶ್ರಧ್ಧಾಭಕ್ತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು ಇಂತಹ ದಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃಧ್ಧಿ ಟ್ರಸ್ಟ್ನ ಅಧ್ಯಕ್ಷರು ಹಾಗೂ ಬಿ.ಜೆ.ಪಿ ಪ್ರಮುಖರು ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಎಲ್ಲಿ ಶ್ರಧ್ಧೆ ಇರುತ್ತದೆಯೋ ಅಲ್ಲಿ ಭಕ್ತಿ ಇರುತ್ತದೆ. ಎಲ್ಲಿ ಭಕ್ತಿ ಇರುತ್ತದೆಯೋ ಅಲ್ಲಿ ಶಕ್ತಿ ಇರುತ್ತದೆ. ಶ್ರೀ ಅಯ್ಯಪ್ಪ ಭಕ್ತ ಮಂಡಳಿಯವರು 18 ವರ್ಷಗಳಿಂದ ಈ ರೀತಿಯ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿರುವುದರಿಂದ ಇದೊಂದು ಶಕ್ತಿಯಳ್ಳ ಪ್ರದೇಶವಾಗಿದೆ. ಧರ್ಮೋ ರಕ್ಷತಿ ರಕ್ಷಿತಃ. ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರಿಗೆ ಧರ್ಮವೇ ರಕ್ಷಿಸುತ್ತದೆ ಎನ್ನುವುದು ಪ್ರಾಜ್ಞರ ಮಾತು. ತಾವೆಲ್ಲಾ ಇಂತಹ ಧರ್ಮ ರಕ್ಷಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಿರಿ. ಅತ್ಯಂತ ವೈಭವ ಹಾಗೂ ಶ್ರಧ್ಧಾ ಪೂರ್ವಕವಾಗಿ ಅಯ್ಯಪ್ಪ ಸ್ವಾಮಿಯ ಆರಾದನೆ ಮಾಡಲಾಗುತ್ತಿದ್ದು ಶ್ರೀ ದೇವರು ಇಲ್ಲರಿಗೂ ಸನ್ ಮಂಗಲವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಅಧ್ಯಕ್ಷತೆ ವಹಿಸಿದ ಸದಾನಂದ ಹರಿಕಾಂತ ಅವರು ಮಾತನಾಡಿ ಈ ಕಾರ್ಯಕ್ರಮ ಅತ್ಯಂತ ಅಧ್ಧೂರಿಯಾಗಿ ನಡೆಯುತ್ತಿದ್ದು ನಾಗರಾಜ ನಾಯಕ ತೊರ್ಕೆ ಅವರು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡಿದ್ದಾರೆ. ಅವರ ಆಗಮನ ಈ ಸಭೆಗೆ ಕಳೆ ತಂದಿದೆ ಎಂದು ಹೇಳುತ್ತಾ ಅವರ ಸಾಮಾಜಿಕ ಕಳಕಳಿಯನ್ನ ಶ್ಲಾಘಿಸಿ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ಜರುಗಲಿ ಎಂದು ಹಾರೈಸಿದರು.
ಇದೆ ವೇದಿಕೆಯಲ್ಲಿ ಗುರು ಸ್ವಾಮೀಗಳಾದ ಕೃಷ್ಣ ಸ್ವಾಮಿಯವರನ್ನ ಹಾಗೂ ಶ್ರೀ ರಾಮಾಂಜನೇಯ ದೇವಸ್ಥಾನದ ಧರ್ಮ ದರ್ಶಿಗಳಾದ ಶ್ರೀಪಾದ ನಾಯ್ಕ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಜಿ.ಪಟಗಾರ, ಭಾರತಿ ಶಿವಾನಂದ ಹರಿಕಾಂತ, ಈಶ್ವರ ಎನ್. ಪಟಗಾರ, ನಾಗೇಶ ಎಸ್. ನಾಯ್ಕ, ರಮ್ಯಾ ರಾಘವೇಂದ್ರ ಶೇಟ, ಶಾರದಾ ರಾಮಚಂದ್ರ ಪಟಗಾರ, ವೆಂಕಟ್ರಮಣ ನಾರಾಯಣ ಹರಿಕಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.