ನಮ್ಮೊಳಗೇ ಇದ್ದು ಅಪ್ರತಿಮ ಸಾಧನೆ ಮಾಡಿದ ಜನರು ಬಹಳ ಮಂದಿ. ಈಗ ಆ ಪಟ್ಟಿಗೆ ಇವರೆಲ್ಲರೂ ಸೇರಿದ್ದಾರೆ ಎಂದರೂ ತಪ್ಪಲ್ಲ .
School Games And Activity Development Foundation India ಇವರ ನೇತೃತ್ವದಲ್ಲಿ ನಡೆದ 3rd All India National Championship 2017-2018 Jaipur .ಅದ್ವೈತ ಸ್ಪೋರ್ಟ್ಸ್ ಕ್ಲಬ್ ಹೊನ್ನಾವರದ ವತಿಯಿಂದ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ 17 ವರ್ಷದ ಒಳಗಿನ ವಿಭಾಗದಲ್ಲಿ ಸ್ಪರ್ಧಿಸಿ ಮಣಿಕಂಠ ಮುಕ್ರಿ.ಕುಮಟಾ (400ಮೀಟರ್ ಓಟ ಬಂಗಾರದ ಪದಕ ) ದಾಮೋದರ ಗೌಡ.ಕುಮಟಾ (3000ಮೀಟರ್ ಓಟ ಬಂಗಾರದ ಪದಕ) ಮಹೇಶ್ ನಾಯ್ಕ್ . ಕುಮಟಾ (ಟ್ರಿಪಲ್ ಜಂಪ್. ಬಂಗಾರದ ಪದಕ) ಪ್ರಜ್ವಲ್ ಭಟ್ . ಹೊನ್ನಾವರ.(ಗುಂಡು ಎಸೆತ .ಬಂಗಾರದ ಪದಕ) ರಾಮ್ ಶೇಟ್ . ಹೊನ್ನಾವರ .(800ಮೀಟರ್ ಓಟ .ಬೆಳ್ಳಿ ಪದಕ) ಪಡೆದು ವಿಜೇತರಾಗಿ ಶ್ರೀಲಂಕಾದಲ್ಲಿ ನಡೆಯುವ ಅಂತರಾಷ್ಟ್ರೀಯಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ಇವರೆಲ್ಲರಿಗೂ ಅಭಿನಂದೆಗಳ ಮಹಾಪೂರವೇ ಹರಿದು ಬಂದಿದೆ.ಅವರ ಸಾಧನೆಗೆ ಇನ್ನಷ್ಟು ಯಶ ಸಿಗಲೆಂದು ಹಾರೈಸುತ್ತಿದ್ದಾರೆ ಜನರು.
ಹಾಗೆಯೇ ಇವರೆಲ್ಲರಿಗೂ ತರಬೇತಿ ನೀಡಿದ ಹೊನ್ನಾವರದ ಅದ್ವೈತ ಸ್ಪೋರ್ಟ್ಸ್ ಕ್ಲಬ್ಬಿನ ಶ್ರೀ ರಾಘವೇಂದ್ರ ಮೇಸ್ತ ಇವರಿಗೂ ಕೂಡ ಸ್ಪರ್ಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಲಿ ಎಂಬುದೇ ನಮ್ಮ ಆಶಯ.