ಕಾರವಾರ: ನಗರದ ಬೈತಖೋಲ್‍ದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯಲ್ಲಿದ್ದ ಮೀನುಗಳು ಸತ್ತಿದ್ದರಿಂದ ನೀರು ದುರ್ವಾಸನೆಯುಕ್ತವಾಗಿದ್ದರಿಂದ ಜನರ ಆತಂಕಗೊಂಡರು.

ನಿತ್ಯ ಈ ಭಾಗದ ಮೀನುಗಾರರು ಎಂದಿನಂತೆ ನಿತ್ಯದ ಉಪಯೋಗಕ್ಕೆ ನೀರು ಒಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಬಾವಿಯ ಹತ್ತಿರ ಸತ್ತ ಮೀನಿನ ವಾಸನೆ ಹಬ್ಬಿಕೊಂಡಿದ್ದ ಜನರ ಬಾವಿಯಲ್ಲಿ ನೀರು ಸತ್ತಿರುವುದು ಗಮನಿಸಿದ್ದಾರೆ.

ಬಳಿಕ ನಗರಸಭೆ ಸದಸ್ಯೆ ಛಾಯಾ ಜಾವಕರ್ ಅವರಿಗೆ ವಿಷಯ ತಿಳಿಸಿದಾಗ ನೀರು ಕೆಟ್ಟಿರುವುದರಿಂದ ಆರೋಗ್ಯ ಕೇಂದ್ರದ ಸಿಬ್ಬಂದಿ ನೀರನ್ನು ಶುದ್ಧಿಕರಿಸಲು ದ್ರಾವಣ ಸಿಂಪಡಿಸಿರುವ ಬಗ್ಗೆ ತಿಳಿಸಿದರು. ಇದರಿಂದ ಮೀನುಗಳು ಸತ್ತಿದೆ ಎನ್ನುವ ಮಾಹಿತಿ ನೀಡಿದರು. ಆದರೆ ಈಗ ನೀರು ಉಪಯೋಗಿಸಬಹುದು ಎಂದು ತಿಳಿಸಿದರು.

RELATED ARTICLES  ಕೊಚ್ಚಿ ಹೋದ ಗದ್ದೆ, ತೋಟ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ಗ್ರಾಮಸ್ಥರು

ಆದರೆ ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಬಾವಿ ಶಾಲಾ ಆವರಣದಲ್ಲಿದ್ದರಿಂದ ಶಾಲೆಯ ಮುಖ್ಯಾಧ್ಯಾಪಕರಿಗೆ ದ್ರಾವಣ ಸಿಂಪಡಿಸುವ ಬಗ್ಗೆ ಮಾಹಿತಿ ನೀಡಿಲ್ಲ. ಶಾಲೆಯ ಕೆಲ ಸಿಬ್ಬಂದಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಈ ರೀತಿ ಮಾಡಿರುವುದು ಸರಿಯಲ್ಲ. ಈ ಬಗ್ಗೆ ತಿಳಿಯದ ಜನರ ಆನಂತಗೊಂಡಿದ್ದಾರೆ. ಮುಂದಿನ ದಿನದಲ್ಲಿ ಇಂಥ ತಪ್ಪು ನಡೆಯಬಾರದು ಎಂದು ಎಚ್ಚರಿಕೆ ನೀಡಿದರು.

RELATED ARTICLES  ಗುಡ್ಡ ಕುಸಿತ : ಕೆಲಕಾಲ ರಸ್ತೆ ಸಂಚಾರ ವ್ಯತ್ಯಯ.

ಈ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಂಬಂಧಪಟ್ಟ ಬಾವಿಯ ನೀರು ಪರೀಕ್ಷೆ ನಡೆಸಿದಾಗಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಪತ್ತೆಯಾಗಿತ್ತು. ಆದ್ದರಿಂದ ಶಾಲೆಯ ರಜಾ ಅವಧಿಯಲ್ಲಿ ಬಾವಿಯ ನೀರಿನ ಶುದ್ಧಿಕರಣಕ್ಕಾಗಿ ದ್ರಾವಣ ಸಿಂಪಡಿಸಲಾಗಿದೆ. ಇದರಿಂದಾಗಿ ಬಾವಿಯಲ್ಲಿದ್ದ ಮೀನು ಸತ್ತಿವೆ. ಈ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಮಾಹಿತಿ ನೀಡಿದರು.