ಹಾಲು ಹಬ್ಬಕ್ಕೆ ಆಹ್ವಾನಿಸಿದ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರೀ ಶಾಮ್ ಭಟ್ ಬೇರ್ಕಡವು.

ರಾಮಚಂದ್ರಾಪುರ ಮಠದ ವತಿಯಿಂದ ಹಾಗೂ ಸಮಸ್ತ ಗೋ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಹಾಲು ಹಬ್ಬಕ್ಕೆ ಸಮಸ್ತರನ್ನೂ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರೀ ಶಾಮ್ ಭಟ್ ಬೇರ್ಕಡವು ಆಮಂತ್ರಿಸಿದ್ದಾರೆ.ಎಲ್ಲರನ್ನೂ ಆಹ್ವಾನಿಸಿ ಮಾತನಾಡಿದ ಅವರು

ಗೋಮಾಂಸ ಭಕ್ಷಣೆ ಕುರಿತಾಗಿ BeafFest ಆಯೋಜನೆ ಮೂಲಕ ಹಾಲುಂಡ ಜೀವಿಗಳ ಮನಸ್ಸು ಕದಡುವ ಪ್ರಯತ್ನ ದೇಶದೆಲ್ಲೆಡೆ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯ ಗೋಮಾತೆಯ ಹಿರಿಮೆಯ ಪ್ರಭಾವಲಯವನ್ನು ಮಸುಕು ಮಾಡಿ, ತನ್ಮೂಲಕ ನಮ್ಮ ಸನಾತನ ಸಂಸ್ಕೃತಿಯನ್ನು ಸಂಕರಗೊಳಿಸುವ ಯತ್ನ ಇದರ ಹಿಂದಿದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರು ಗೋವಿನ, ಗವ್ಯೋತ್ಪನ್ನಗಳ ಮಹತ್ವವನ್ನು ಹಾಗೂ ಗೋಮಾಂಸ ಭಕ್ಷಣೆಯಿಂದಾಗುವ ತೊಂದರೆಗಳನ್ನು ವಿಶ್ವದ ಮಹಾಜನತೆಯ ಅರಿವಿಗೆ ತರಲೋಸುಗ #ಹಾಲುಹಬ್ಬ (#MilkFest) ಆಚರಣೆ ಹಾಗೂ ಚಿಂತನೆ ಮುಖೇನ ಗೋಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲು ಗೋಕಿಂಕರರಿಗೆ ನಿರ್ದೇಶನ ನೀಡಿರುತ್ತಾರೆ. ಅಂತೆಯೇ ಗೋಮಹತಿಯನ್ನು ಮತ್ತಷ್ಟು ದೃಡತೆಯಿಂದ ಸಮಾಜಕ್ಕೆ ಸಾರುವ ಸಂಕಲ್ಪ ಬದ್ಧರಾಗಿದ್ದಾರೆ.  #ಹಾಲುಹಬ್ಬ ಆಂದೋಲನದ ಮೊದಲ ಕಾರ್ಯಕ್ರಮವಾಗಿ ದಿನಾಂಕ 11.06.2017 ನೇ ಭಾನುವಾರದಂದು ಬೆಂಗಳೂರಿನಲ್ಲಿನ ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ  #ಹಾಲುಹಬ್ಬ ಸಂಪನ್ನಗೊಳ್ಳಲಿದೆ.
ಶ್ರೀಸಂಸ್ಥಾನದವರ ಗೋರಕ್ಷಣೆಯ ಆಶಯದಂತೆ ಆಯೋಜಿತವಾದ ಈ ಕಾರ್ಯಕ್ರಮದಲ್ಲಿ ಸಮಸ್ತ ಸಮಾಜ ಬಾಂಧವರೂ ಭಾಗವಹಿಸಬೇಕಾಗಿ ಕೋರುತ್ತೇವೆ ಎಂದರು.

RELATED ARTICLES  ಭಾರತ ಮತ್ತು ಫ್ರಾನ್ಸ್‌ ನಡುವಿನ ರಕ್ಷಣೆ, ಪರಮಾಣು ಶಕ್ತಿ, ರಹಸ್ಯ ದಾಖಲೆಗಳ ಸಂರಕ್ಷಣೆ ಒಪ್ಪಂದ.

ಕುಹಿತಾಸಕ್ತಿಗಳ ಕರಾಳಹಸ್ತ ಗೋಮಾತೆಯ ಒಡಲಿಗೆ ಕತ್ತರಿ ಇರಿಸುವ ಕುಕೃತ್ಯವನ್ನು ಖಂಡಿಸಿ, #ಹಾಲುಹಬ್ಬದಲ್ಲಿ ನಾವೆಲ್ಲಾ ಸೇರಿ ಗೋಮಾತೆಗೆ ಕೃತಜ್ಞತೆ ಅರ್ಪಿಸೋಣ.ಎಂದ ಅವರು ಎಲ್ಲರ ಸಹಕಾರ ಕೋರಿದರು.

RELATED ARTICLES  ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಕ್ಷೇಮವಾಗಿದ್ದು ಭಕ್ತರು ಆತಂಕ ಪಡಬೇಕಾಗಿಲ್ಲ : ವೈದ್ಯರ ಸ್ಪಷ್ಠನೆ