ಸಾಗರ : ೨೦೧೦ ರಲ್ಲಿ ೩ ವರ್ಷ ಅವಧಿಯಿದ್ದ ಮರಳು ಟೆಂಡರ್ ನ್ನು ಏಕಾಏಕಿ ೬ ತಿಂಗಳಿಗೇ ಗಣಿ ಮತ್ತು ಭೂವಿಜ್ನಾನ ಅಧಿಕಾರಿಗಳು ರದ್ದುಪಡಿಸಿದ್ದರು. ಇದರಿಂದ ಕರಾರು ಉಲ್ಲಂಘನೆಯಾಗಿತ್ತು. ಟೆಂಡರ್ ಹಣ ಪಾವತಿಸಿ ಅನ್ಯಾಯಕ್ಕೊಳಗಾಗಿದ್ದ ದೇವರಾಜ್ ಎಂಬುವವರು ಇದನ್ನು ಪ್ರಶ್ನಿಸಿ ೨೦೧೨ ರಲ್ಲಿ ಈ ಸಂಬಂಧ ಸಿವಿಲ್ ಕೋರ್ಟ್ ನಲ್ಲಿ ಕೇಸ್ (damage siut) ಹಾಕಿದ್ದರು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 15-11-2018 ರ ರಾಶಿ ಭವಿಷ್ಯ ಇಲ್ಲಿದೆ.

ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು, ಈ ಸಂಬಂಧ ಅಧಿಕಾರಿಗಳು ೪೧ ಲಕ್ಷ ರೂ ದಂಡ ಪಾವತಿಸಬೇಕೆಂದು ಕೋರ್ಟ್ ಆದೇಶ ಇತ್ತಿತ್ತು. ಈವರೆಗೂ ಆದೇಶ ಪಾಲಿಸದಿದ್ದರಿಂದ,
೩.೧೨.೨೦೧೭ರಂದು ಜಪ್ತಿ ಆದೇಶ ಹೊರಬಿದ್ದಿತ್ತು. ಇಂದು ಕೋರ್ಟ್ ಅಮೀನ್ ರವರು KA-15 G9009 ಸಂಖ್ಯೆಯ ತವೇರಾ ವಾಹನವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

RELATED ARTICLES  ಅಪಘಾತ : ಖ್ಯಾತ ಕಾರ್ ರೇಸರ್ ಸಾವು.

ಸಾಗರ ತಾಲ್ಲೂಕಿನಲ್ಲಿ ತಲೆದೂರಿರುವ ಮರಳು ಸಮಸ್ಯೆ ಮತ್ತು ಅಸಮರ್ಪಕ ಮರಳು ನೀತಿಗೆ ಇದೇ ರೀತಿಯ ಅಧಿಕಾರಿಗಳ ಬೇಜವಾಬ್ದಾರಿಯುತ ನೀತಿಯೇ ಕಾರಣವಾಗಿದ್ದು, ಅಧಿಕಾರಿಗಳು ಇನ್ನಾದರೂ ಎಚ್ಚರವಾಗುತ್ತಾರೋ ನೋಡಬೇಕಿದೆ.