ಭಟ್ಕಳ : ಇಲ್ಲಿನ ಶಂಶುದ್ದೀನ್ ಸರ್ಕಲ್‍ನ ಸಾಗರ ರಸ್ತೆ ಮಾರ್ಗದ ಡಿವೈಡರನಲ್ಲಿ ಪುರಸಭೆಯಿಂದ ಅಳವಡಿಸಲಾದ ಐ.ಎಮ್.ಆರ್ಸ. ಮರಕ್ಯೂರಿ ಲೈಟ್ ಕೆಲವು ತಿಂಗಳಿಂದ ಕೆಟ್ಟು ಹೋಗಿದೆ. ಮರಕ್ಯೂರಿ ಲೈಟ್ ಪ್ರತಿನಿತ್ಯ ಚಾಲ್ತಿಯಲ್ಲಿದ್ದು, ಆದರೆ ಕಂಬಕ್ಕೆ ಅಳವಡಿಸಲಾದ ಲೈಟ್ ಕಂಬದ ಅರ್ಧಕ್ಕೆ ಜೋತು ಬಿದ್ದಿದೆ.

ದಿನನಿತ್ಯ ಸಾಗರ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳು ತಿರುಗಾಡುತ್ತಿದ್ದು, ಸದ್ಯ ಭೀತಿಯಲ್ಲಿಯೇ ಓಡಾಡುವಂತಾಗಿದೆ. ಸದ್ಯ ಕೆಟ್ಟು ನಿಂತಿದೆ. ಆದರೆ ಐ.ಎಮ್.ಆರ್ಸ. ಮರಕ್ಯೂರಿ ಲೈಟ್ ಬಳಕೆಯಲ್ಲಿದ್ದು, ಕಂಬಕ್ಕೆ ಅಳವಡಿಸಲಾದ ಲೈಟ್ ಅರ್ಧಕ್ಕೆ ಬಂದು ಜೋತು ಬಿದ್ದಿ ಸ್ಥಿತಿಯಲ್ಲಿದೆ. ಈಗಲೋ ಆಗಲೋ ನೆಲಕ್ಕುರುಳಿವ ಸ್ಥಿತಿಯಲ್ಲಿದ್ದರ ಪರಿಣಾಮ ಸಾರ್ವಜನಿಕರು ಭಯದಲ್ಲಿ ತಿರುಗಾಡುವಂತಾಗಿದೆ.

RELATED ARTICLES  ಒಂದು ವರ್ಷ ಪೂರೈಸಿದ 'ಗೋಕರ್ಣ ಗೌರವ' ಕಾರ್ಯಕ್ರಮ

ರಾತ್ರಿ ಸಮಯದಲ್ಲಿ ಜನರಿಗೆ ಓಡಾಡಲು ಅನೂಕೂಲವಾಗುವ ಬದಲು ಲೈಟ್ ಯಾವತ್ತು ನೆಲಕ್ಕುರುಳುವ ಭೀತಿ ಎದುರಾಗಿದೆ. ಪುರಸಭೆಯ ವ್ಯಾಪ್ತಿಗೆ ಬರುವ ಈ ಐ.ಎಮ್.ಆರ್ಸ. ಮರಕ್ಯೂರಿ ಲೈಟ್ ಒಟ್ಟು 6 ಲೈಟ್‍ಗಳಿವೆ. ಅದರಲ್ಲೂ 6 ಲೈಟ್‍ಗಳಲ್ಲಿ ಕೆಲವು ಚಾಲ್ತಿಯಲ್ಲಿದ್ದು, ಇನ್ನು ಕೆಲವು ಹಾಳಾಗಿದೆ. ಇನ್ನು ಲೈಟ್ ಕೆಳಗಿದ್ದ ವಿದ್ಯುತ್ ಸಲಕರಣೆ ಪೆಟ್ಟಿಗೆಯೂ ಸಹ ತುಕ್ಕು ಹಿಡಿದ್ದು ವಾಹನ ಅದರಲ್ಲಿನ ವೈಯರ್‍ಗಳು ಸಹ ಕಿತ್ತು ಹೋಗಿದೆ. ಅಲ್ಲಿಯೇ ಪಕ್ಕದಲ್ಲಿ ರಿಕ್ಷಾ ನಿಲ್ದಾಣವೂ ಸಹ ಇದ್ದು ರಿಕ್ಷಾ ಚಾಲಕರು ಭಯದಲ್ಲಿ ಸ್ಟಾಂಡ್‍ನಲ್ಲಿ ನಿಲ್ಲುವಂತಾಗಿದೆ. ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾದಚಾರಿಗಳು ವಾಹನ ಸವಾರರು ಲೈಟ್ ನೆಲಕ್ಕೆ ಬೀಳುವ ಭೀತಿಯಲ್ಲಿ ತಿರುಗಾಡುವಂತಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಸಮಸ್ಯೆಯ ಬಗ್ಗೆ ಗೊತ್ತಿದ್ದು ಅದನ್ನು ರಿಪೇರಿ ಮಾಡಲು ಸಾಧ್ಯವಾಗಿಲ್ಲ ಎಂಬ ಉತ್ತರ ಹೇಳುತ್ತಿದ್ದಾರೆ.

RELATED ARTICLES  ಶಶಿಭೂಷಣ ಹೆಗಡೆಯವರಿಗೆ ಸಿಕ್ಕಿತು ಬಲ: ಜೆಡಿಎಸ್ ಸೇರ್ಪಡೆಯಾದ ದಿವಸ್ಪತಿ ನಾಯ್ಕ.

ಐ.ಎಮ್.ಆರ್ಸ. ಮರಕ್ಯೂರಿ ಲೈಟ್ ರಾತ್ರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆದರೆ ಕಂಬಕ್ಕೆ ಅಳವಡಿಸಿದ ಲೈಟ್ ಜೋತು ಬಿದ್ದಿದೆ. ಸದ್ಯ ಇದರ ರಿಪೇರಿ ಕಾರ್ಯಕ್ಕೆ ಬಾರದೇ ಇರುವ ಸ್ಥಿತಿಯಲ್ಲಿದ್ದು, ಇದರ ಮೋಟಾರ್ ತನ್ನ ಕಾರ್ಯವನ್ನು ಸ್ಥಗಿತವಾಗಿದೆ. ಹೊಸದಾದ ಮೋಟರ್ ಖರೀದಿ ಮಾಡಿದರೆ ಮರಕ್ಯೂರಿ ಲೈಟ್ ಖರೀದಿಸಿದ ವೆಚ್ಚಕ್ಕೆ ಸಮನಾಗಿರುವ ಕಾರಣ ಹಾಗೇ ಇಡಲಾಗಿದೆ. ಅದನ್ನು ಕೆಳಗಿಳಿಸಲು ಆಗದೇ ರಿಪೇರಿ ಮಾಡಲು ಸಾಧ್ಯವಾತ್ತಿಲ್ಲದರ ಕಾರಣ . 2-3 ದಿನದೊಳಗಾಗಿ ಕ್ರೇನ್ ಸಹಾಯದಿಂದ ಸರಿಪಡಿಸಲಾಗುವುದು ಎ0ದು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ ತಿಳಿಸಿದ್ದಾರೆ.