ಭಟ್ಕಳ:ತಾಲೂಕಿನಲ್ಲಿ 19 ರಿಂದ 21 ರ ವರೆಗೆ ಕಟ್ಟೆವೀರ ಸ್ಪೋರ್ಟ್ಸ ಕ್ಲಬ್ ವತಿಯಿಂದ ಮೂರು ದಿನಗಳ ಕಾಲ ಕಬ್ಬಡ್ಡಿ ಪದ್ಯಾವಳಿ ನಡೆಯಲಿದೆ.

ಪಂದ್ಯಾವಳಿಯನ್ನು ಸಾಗರ ರಸ್ತೆಯ ಗುರುಸುಧೀಂದ್ರ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದ್ದಾರೆ.

RELATED ARTICLES  ಯಲ್ಲಾಪುರದ ಸರಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಷ್ಟೀಯ ಮಟ್ಟದ 16 ಆಹ್ವಾನಿತ ತಂಡಗಳು ಭಾಗವಹಿಸಲಿದ್ದು ಪ್ರಥಮ ಭಹುಮಾನ 1 ಲಕ್ಷ ರೂ ಹಾಗೂ ಆಕರ್ಷಕ ಕಪ್ ದ್ವಿತಿಯ 50 ಸಾವಿರ ಬಹುಮಾನ ಮತ್ತು ಆಕರ್ಶಕ ಕಪ್ ಮತ್ತು ಉತ್ತಮ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ಇಡಲಾಗಿದೆ ಎಂದರು.

RELATED ARTICLES  ಭಟ್ಕಳ ಕ.ಸಾ.ಪ ದಿಂದ ಉತ್ತಮ ಕಾರ್ಯಕ್ರಮ.

ಪದ್ಯಾವಳಿಯನ್ನು ಶಿವಾನಿ ಶಾಂತಾರಾಮ್ ಪ್ರಯೋಜಿಸಿದ್ದಾರೆ ಎಂದು ಅವರು ಪಂದ್ಯಾವಳಿಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ,ಇಹತೆಶಾಮ್,ಚಾಮುಂಡಿ ಕಬ್ಬಡ್ಡಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಕೆ.ವಿ ರಾಜೇಶ ಮುಂತಾದವರು ಉಪಸ್ಥಿತರಿದ್ದರು.