ಶ್ರೀನಗರ: ಗಡಿ ಭದ್ರತಾ ಪಡೆಯ ಆ ಯೋಧನಿಗೆ ಇಂದು ಅತ್ಯಂತ ಸಂಭ್ರದ ದಿನವಾಗಿತ್ತು. 51 ವರ್ಷದ ಆ ಯೋಧ ರಾಧಾ ಪದ್ ಹಜಾರ್ ಅವರು ತಮ್ಮ ಸಂತಸವನ್ನು ದೂರದಿಂದಲೇ ಹಂಚಿಕೊಂಡು ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿದ್ದ ವೇಳೆ ತಮ್ಮ ಜನ್ಮ ದಿನವೇ, ತಮ್ಮ ಜೀವನದ ಕೊನೆಯ ದಿನವಾಗುತ್ತದೆ ಎಂದು ತಿಳಿದಿರಲಿಲ್ಲ.
ಇಂದು ಸಂಜೆ 4:35ಕ್ಕೆ ಇಲ್ಲಿನ ಬಿಎಸ್‌ಎಫ್‌ನ 173ನೆಯ ಬೆಟಾಲಿಯನ್ ಮೇಲೆ ಪಾಕಿಸ್ಥಾನ ಸೈನಿಕರು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಶತ್ರುಗಳ ಗುಂಡು ಆ ಯೋಧನನ್ನು ಜನ್ಮದಿನದಂದೇ ವೀರಸ್ವರ್ಗವನ್ನು ಸೇರಿಸಿದೆ.
ಇಲ್ಲಿನ ಬೆಟಾಲಿಯನ್ ಮೇಲೆ ಪಾಕಿಸ್ಥಾನ ಸೈನಿಕರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಭಾರತೀಯ ಯೋಧರು ಸರಿಯಾದ ಪ್ರತ್ಯುತ್ತರ ನೀಡಿದರು. ಈ ವೇಳೆ ನಡೆದ ಗಂಡಿನ ಚಕಮಕಿಯಲ್ಲಿ ಹಜಾರ್ ಅವರಿಗೆ ಗುಂಡು ತಗುಲಿತು. ತತಕ್ಷಣವೇ ಅವರನ್ನು ಡಿಎಚ್ ಸಂಬಾ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಆ ವೇಳೆಗಾಗಲೇ ವೀರಯೋಧನ ಪ್ರಾಣ ವೀರಸ್ವರ್ಗ ಸೇರಿತ್ತು.
ಪಶ್ಚಿಮ ಬಂಗಾಳ ಮೂಲದ 51 ವರ್ಷದ ಈ ವೀರಯೋಧ ದೇಶಕ್ಕಾಗಿ 27 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಜನ್ಮದಿನದಂದೇ ಹುತಾತ್ಮರಾಗಿದ್ದಾರೆ.