ಶಿರಸಿ : ತಾಲೂಕಿನ ಕರಸುಳ್ಳಿ ಗ್ರಾಮದ ರಸ್ತೆ ದುರಸ್ಥಿ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳಬೇಕೆಂದು ಆಗ್ರಹಿಸಿ ಕರಸುಳ್ಳಿ ಊರ ನಾಗರಿಕರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಸಲ್ಲಿಸಿದರು.
ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಕರಸುಳ್ಳಿ ಗ್ರಾಮದ ರಸ್ತೆ ಡಾಂಬರೀಕರಣ ಆಗಿದ್ದರೂ ಸಹ ಸಂಪೂರ್ಣವಾಗಿ ಕೆಟ್ಟಿದೆ. ರಸ್ತೆಯಲ್ಲಿ ನಡೆದಾಡುವುದು ಅಸಾಧ್ಯವಾಗಿದೆ. ಅಲ್ಲದೇ ಈಗಾಗಲೇ ಶಾಲೆಗೆ ಹೋಗುವ ಮಕ್ಕಳೂ ಸಹ ಸೈಕಲ್ ಮೇಲಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದ್ದರಿಂದ ಹೊಸ ರಸ್ತೆಯ ಅಗತ್ಯವಿದ್ದು, ತಕ್ಷಣವೇ ಮಾಡಿಕೊಡಬೇಕು ಎಂದು ಆಗ್ರಹಿಸಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಭೀಮಪ್ಪ ಭಟ್ಟೂರ್ ಅವರಿಗೆ ಮನವಿ ನೀಡಿದರು.
ಗ್ರಾಮಸ್ಥರ ಪರವಾಗಿ ಗಣಪತಿ ಭಟ್ ಮಾತನಾಡಿ ರಸ್ತೆ ತುಂಬೆಲ್ಲಾ ಕಡಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ತುರ್ತಾಗಿ ಡಾಂಬರೀಕರಣ ಅಥವಾ ರಿಪೇರಿ ಕೆಲಸ ಮಾಡುವ ಅಗತ್ಯವಿದೆ. ಗ್ರಾಮಸ್ಥರು ಈಗಾಗಲೇ ಹಲವಾರು ಬಾರಿ ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಈ ವೇಳೆ ಗ್ರಾಮಸ್ಥರಾದ ವಿ.ಜಿ.ಹೆಗಡೆ , ಗಣಪತಿ ಹೆಗಡೆ, ಎಮ್.ಆರ್.ಹೆಗಡೆ, ಬಿ.ಬಿ.ಹೆಗಡೆ, ಗಜಾನನ ಹೆಗಡೆ, ರಾಜಶೇಖರ ಹೆಗಡೆ, ಸುಧಾ ಭಟ್, ಮಧುರಾ ಭಟ್ ಹಾಗೂ ಜಿಪಂ ಎಇಇ ರಾಮಚಂದ್ರ ಗಾಂವಕರ ಮುಂತಾದವರು ಇದ್ದರು.