ಅಂಕೋಲಾ : ಇಲ್ಲಿಯ ಲಾಯನ್ಸ್ ಕ್ಲಬ್ ವತಿಯಿಂದ ಜ. ೭ ಭಾನುವಾರದಂದು ಪಿ. ಎಂ. ಪದವಿಪೂರ್ವ ವಿದ್ಯಾಲಯದಲ್ಲಿ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ. ಮಣಿಪಾಲದ ವೈದ್ಯರ ತಂಡ ನೇತ್ರ ತಪಾಸಣಾ ಶಿಬಿರವನ್ನು ನಡೆಸಿ ಕೊಡಲಿದೆ. ದಂತ ತಪಾಸಣಾ ಶಿಬಿರವನ್ನು ಅಂಕೋಲಾದ ಉಮಾ ಮಲ್ಟಿಸ್ಪೆಶಾಲಿಟಿ ಕ್ಲಿನಿಕ್‌ನ ಡಾ. ಕರುಣಾಕರ ಎಂ. ಎನ್. ನಡೆಸಿಕೊಡಲಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಳ್ಳುವವರು ಆಧಾರ ಕಾರ್ಡನ ಝರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.

RELATED ARTICLES  ಮತ್ಸಮಹಿಳಾ ಸ್ವಾವಲಂಬಿ ಯೋಜನೆಯ ಚೆಕ್ ವಿತರಣೆ

ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಶಿಬಿರಾರ್ಥಿಗಳನ್ನು ಅದೇ ದಿನ ಶಸ್ತ್ರ ಚಿಕಿತ್ಸೆಗೆಂದು ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಗುವುದು. ಆದ್ದರಿಂದ ದೃಷ್ಟಿ ದೋಷ ಇದ್ದವರು ಮೂರು ದಿನಕ್ಕೆ ಬೇಕಾಗುವ ಪರಿಕರವನ್ನು ತಮ್ಮೊಂದಿಗೆ ತರಬೇಕು.

RELATED ARTICLES  ಭಟ್ಕಳದ ಎರಡು ಪ್ರಸಿದ್ಧ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆಗೆ ಸೂಚನೆ.

ಶಿಬಿರಾರ್ಥಿಗಳಿಗೆ ಮಣಿಪಾಲದಲ್ಲಿ ‘ಉಚಿತ ಚಿಕಿತ್ಸೆ’ ಹಾಗೂ ಉಚಿತ ಊಟವನ್ನು ನೀಡಲಾಗುವುದು. ಶಿಬಿರದಲ್ಲಿ ಕಣ್ಣಿನ ದೋಷವುಳ್ಳವರಿಗೆ ಉಚಿತ ಕನ್ನಡಕವನ್ನು ನೀಡಲಾಗುವುದು ಎಂದು ಕ್ಲಭ್‌ನ ಅಧ್ಯಕ್ಷ ಶಶಿಧರ ಶೇಣ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.