ಹೊನ್ನಾವರ: ‘ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ಜಾರಿಗೊಳಿಸದಿದ್ದರೆ ಸರ್ಕಾರಿ ನೌಕರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನಾಯಕ ಹೇಳಿದರು.

ಹೊನ್ನಾವರದ ಎಸ್.ಡಿ.ಎಂ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

RELATED ARTICLES  ಮಹಿಳೆ ಸ್ನಾನ ಮಾಡುತ್ತಿರುವಾಗ ಬೆತ್ತಲೆ ವಿಡಿಯೋ ಮಾಡಲು ಯತ್ನ..? ಆರೋಪಿ ಅರೆಸ್ಟ್

ಕೇಂದ್ರ ಸರ್ಕಾರಿ ನೌಕರರಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರಿ ನೌಕರರು ಹಲವಾರು ಬಾರಿ ಮನವಿ ಸಲ್ಲಿಸಿದರೂ ವೇತನ ಪರಿಷ್ಕರಣೆ ಮಾಡಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ವೇತನ ಹೆಚ್ಚಳಕ್ಕೆ ಆಶ್ವಾಸನೆ ಕೇಳಿ ಬರುತ್ತಿದೆ. ಕೇಂದ್ರ ನೌಕರರಿಗಿಂತ ಕಡಿಮೆ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರು ಇಂದಿನ ಆಧುನಿಕ ಯುಗದ ಮಾರುಕಟ್ಟೆಯಲ್ಲಿ ಪರದಾಡುವಂತಾಗಿದೆ.

RELATED ARTICLES  ಕೊರೋನಾ ಇನ್ನಷ್ಟು ಸಡಿಲವಾಯ್ತು ನಿಯಮ : ರದ್ದಾಯ್ತು ನೈಟ್ ಕರ್ಫ್ಯೂ : ಶಾಲೆಗಳ ಪುನರಾರಂಭ.

ಎನ್.ಪಿ.ಎಸ್ ರದ್ದುಗೊಳಿಸಬೇಕು ಮತ್ತು ಆರನೇ ವೇತನ ಆಯೋಗ ಕೂಡಲೇ ಜಾರಿಗೊಳಿಸಬೇಕು.ಇಲ್ಲದಿದ್ದರೆ ಸರ್ಕಾರಿ ನೌಕರರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.