ದಾಂಡೇಲಿ : ದಾಂಡೇಲಿಯ ರೋಟರಿ ಕ್ಲಬ್ ವತಿಯಿಂದ ಸಂಡೇ ಮಾರುಕಟ್ಟೆಯ ಬಳಿ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ಸಚಿವ ಆರ್. ವಿ. ದೇಶಪಾಂಡೆ ಶುಕ್ರವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದೇಶಪಾಂಡೆಯವರು ನಗರದ ಸೌಂದರ್ಯ ವರ್ಧನೆಗೆ ನೂತನ ತಂತ್ರಜ್ಞಾನ ಅಳವಡಿತ ಬಸ್ ನಿಲ್ದಾಣಗಳು ಶೋಭೆ ತರಲಿದೆ ಎಂದರು.

RELATED ARTICLES  ಸಂಕನೂರು ಪರ ಶಾಸಕ ದಿನಕರ ಶೆಟ್ಟಿಯವರಿಂದ ಬಿರುಸಿನ ಪ್ರಚಾರ

ಈ ಸಂದರ್ಭದಲ್ಲಿ ರೋಟರಿ ಕ್ಲಬಿನ ಅಧ್ಯಕ್ಷ ರವಿ ನಾಯ್ಕ, ಇನ್ನಿರವಿಲ್ ಕ್ಲಬ್ ಅಧ್ಯಕ್ಷ ರಾಜೇಶ್ವರಿ ನಾಯಕ, ಸುನಿತಾ ಮೆಹರವಾಡೆ, ನೀಲಾಂಬಿಕಾ ಕನಿಮೆಹಳ್ಳಿ, ರೋಟರಿ ಸದಸ್ಯರಾದ ರಾಜೇಶ ತಿವಾರಿ, ಎಚ್.ವಾಯ್. ಮೆಹರವಾಡೆ, ಎಸ್.ಪ್ರಕಾಶ ಶೆಟ್ಟಿ, ಉಮೇಶ.ಜಿ.ಇ, ಎಸ್.ಬಿ.ಬಿರದಾರ, ಬಸ್ ತಂಗುದಾಣದ ದಾನಿಗಳಾದ ರೊ. ರಾಜೇಶ ವೆರ್ಣೇಕರ್, ಅಶುತೋಷರಾಯ್, ಗಣೇಶ ಕಾಮತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ನಗರಸಭೆಯ ಅಧ್ಯಕ್ಷ ಎನ್.ಜಿ.ಸಾಳುಂಕೆ, ಉಪಾಧ್ಯಕ್ಷ ಮಹಮ್ಮದ್ ಫನಿಬಂದ್, ನಗರಸಭಾ ಸದಸ್ಯರು, ಕಾಗದ ಕಾರ್ಖಾನೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಜಿ ಗಿರಿರಾಜ, ರೋಟರಿಯ ಇತರ ಸದಸ್ಯರು ಉಪಸ್ಥಿತರಿದ್ದರು.

RELATED ARTICLES  ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸಾರ್ವಜನಿಕರ ಜೊತೆ ಗ್ರಾಮ ಪಂಚಾಯತಿ ಸದಸ್ಯರು ಒಗ್ಗಟ್ಟಾಗಿ ಹೆದ್ದಾರಿ ತಡೆದು ಪ್ರತಿಭಟನೆ