ಕುಮಟಾ : ತಾಲೂಕಿನ ಅಳಕೋಡ ಪಂಚಾಯತ್ ವ್ಯಾಪ್ತಿಯಲ್ಲಿ ಶಿರಗುಂಜಿ (ಮಬಗಿ) ಗಜಾನನ ನಾಗಪ್ಪ ಅಂಬಿಗ ಮನೆಯ ಹತ್ತಿರದ ಹಳ್ಳಕ್ಕೆ “2017-18 ನೇ ಸಾಲಿನ ಆರ್ಥಿಕ ವರ್ಷದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದ ಯೋಜನೆ”ಯಡಿ ಅಂದಾಜು 5 ಲಕ್ಷ ಅನುದಾನದ ಕಾಲುಸಂಕ ಕಾಮಗಾರಿಗೆ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿ ಪೂಜೆ ನೆರವೇರಿಸಿದರು.

RELATED ARTICLES  ಅಯುಷ್ಮಾನ್ ಭವ ವಿಜಯೀ ಭವ ಮತ್ತು ರಾಮತಾರಕ್ ಮಂತ್ರ ಹೋಮ ಹವನ ಸಂಪನ್ನ.

ಜನತೆಗೆ ಅನುಕೂಲ‌ಕಲ್ಪಿಸುವ ದೃಷ್ಟಿಯಿಂದ ಈ ಕಾಲುಸಂಕದ ಯೋಜನೆ ರೂಪಿಸಲಾಗಿದ್ದು ಇದರ ಸದುಪಯೋಗ ಎಲ್ಲರಿಗೂ ಸಿಗಲಿ ಎಂದು ಶಾಸಕರು ಹಾರೈಸಿದರು. ಈ ಭಾಗದಲ್ಲಿ ತೀರಾ ಅಗತ್ಯವಾಗಿದ್ದ ಕಾಲು ಸಂಕದ ವ್ಯವಸ್ಥೆ ಮಾಡಿಸಿಕೊಟ್ಟ ಶಾಸಕರಿಗೆ ಜನರು ಅಭಿನಂದನೆ ಸಲ್ಲಿಸಿದರು.

RELATED ARTICLES  ಪ ಪೂ ಶ್ರೀ ಶ್ರೀ ಮಹಾದೇವ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಲ್ ನಾಯ್ಕ,ಜಗದೀಪ ತೆಂಗೇರಿ ಮತ್ತು ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಊರ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು.