ಹೊನ್ನಾವರ : ಹಿಂದೂಗಳ ಪವಿತ್ರ ಸ್ಥಾನ ಹಾಗೂ ಅತ್ಯಂತ ಶಕ್ತಿ ಕೇಂದ್ರ ಎಂದೇ ಕರೆಸಿಕೊಂಡಿರುವ ಚಂದಾವರ ಸೀಮೆಯ ಶ್ರೀ ಹನುಮಂತ ದೇವರಿಗೆ ದಂಡಾವಳಿ ಪೂಜೆ ಸಮರ್ಪಿಸಲಾಯಿತು. ದಂಡಾವಳಿ ಪೂಜೆಗಾಗಿ ಮಾಡಿದ ವಿಶೇಷ ಅಲಂಕಾರದಲ್ಲಿ ಹನುಮದೇವ ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದ.

RELATED ARTICLES  ಪೊಲೀಸ್ ತಂಡದೊಂದಿಗೆ ಸಿಆರ್‌ಪಿಎಫ್ ಯೋಧರ ಪಥ ಸಂಚಲನ.

ವಡಗೇರಿ ಗ್ರಾಮದ ಗ್ರಾಮಸ್ಥರು ದಂಡಾವಳಿ ಪೂಜೆಗಾಗಿ ದಿವ್ಯ ಅಲಂಕಾರ ಮಾಡಿದ್ದರು.
ಬಾಳೆಯ ದಿಂಡಿನಿಂದ ಮಾಡಲಾದ ದಂಡಾವಳಿ ವಿಶೇಷ ರೀತಿಯಲ್ಲಿ ಕಂಗೊಳಿಸುತ್ತಿತ್ತು.

ಕಲಾವಿಧನ ಕೈಚಳಕ ವಿಶೇಷ ಆಕರ್ಷಣೆಯಾದರೆ ಅದರ ಜೊತೆಗೆ ಶಕ್ತಿ ಕೇಂದ್ರವಾದ ದೈವ ಸಾನಿಧ್ಯ ಇನ್ನೊಂದು ವಿಶೇಷ. ವರ್ಷದ ಅನೇಕ ಪ್ರಮುಖ ದಿನಗಳಂದು ಈ ರೀತಿಯ ಪೂಜಾ ಕೈಕರ್ಯಗಳು ನಡೆದುಬಂದಿರುವುದಾಗಿ ಇಲ್ಲಿನ ಅರ್ಚಕರು ತಿಳಿಸಿದರು.

RELATED ARTICLES  ಉತ್ತರಕನ್ನಡದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಇಂದು ೩ ಜನ ಕೊರೋನಾಕ್ಕೆ ಬಲಿ

ಪಾರಂಪರಿಕವಾಗಿ ಬಂದ ಅನೇಕ ಪೂಜಾ ವಿಧಾನಗಳನ್ನು ಇಂದಿಗೂ ಮುಂದುವರಿಸಿಕೊಂಡು ಬಂದು ಶ್ರೀ ದೇವರ ಆಶೀರ್ವಾದಕ್ಕೆ ಭಕ್ತರು ಪಾತ್ರರಾದರು