ಮುರ್ಡೇಶ್ವರ : ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ ಯನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರ ಬೀಚ್ ನಲ್ಲಿ ನೆಡೆದಿದೆ.

ಶಿವಮೊಗ್ಗದ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜಿನ ಗಗನ್ (೧೮) ರಕ್ಷಿಸಲ್ಪಟ್ಟ ವಿದ್ಯಾರ್ಥಿ . ಇಂದು ಮುರ್ಡೆಶ್ವರ ಕಡಲ ತೀರದಲ್ಲಿ ಪ್ರವಾಸಕ್ಕೆಂದು ೧೫ ಜನ ವಿದ್ಯಾರ್ಥಿಗಳು ಶಿವಮೊಗ್ಗ ದಿಂದ ಮುರಡೇಶ್ವರಕ್ಕೆ ಬಂದಿದ್ದು ಬೀಚ್ ನಲ್ಲಿ ಈಜುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಈತ ಕೊಚ್ಚಿ ಹೋಗಿದ್ದಾನೆ.

RELATED ARTICLES  ಇಂದಿನ ದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತೇ? ಇಲ್ಲಿದೆ ಓದಿ 14/04/2019 ರ ರಾಶಿ ಫಲ.

FB IMG 1515307503960

ಈ ಸಂದರ್ಭದಲ್ಲಿ ಕೊಚ್ವಿಹೋಗಿದ್ದನ್ನು ಗಮನಿಸಿದ ಲೈಫ್ ಗಾರ್ಡ ಸಿಬ್ಬಂದಿಗಳಾದ ರೋಹಿತ ಹರಿಕಾಂತ,ಶಶಿಧರ,ಮತ್ತು ಬೋಟ್ ಸಿಬ್ಬಂದಿಗಳು ಈತನನ್ನು ರಕ್ಷಿಸಿದ್ದಾರೆ.

ಸ್ಥಳಕ್ಕೆ ಪ್ರವಾಸೋದ್ಯಮ ಅಧಿಕಾರಿಗಳಾದ ರವಿ ವಾಲೇಕರ್ ಬೇಟಿ ನೀಡಿ ಮಾಹಿತಿಪಡೆದಿದ್ದು ಮುರಡೇಶ್ವರ ಠಾಣೆಗೆ ಮಾಹಿತಿ ನೀಡಿದರು.

RELATED ARTICLES  ಮಹಿಳೆ ನಾಪತ್ತೆ ಪ್ರಕರಣ ದಾಖಲು..!