ಬೆಂಗಳೂರು: ಶವದ ಮೇಲೆ ಯಾರೂ ರಾಜಕಾರಣ ಮಾಡಬಾರದು. ಸತ್ತ ಸಂದರ್ಭದಲ್ಲಿ ಎಲ್ಲರೂ ಸಾಂತ್ವನ ಹೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.

ಬಶೀರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದ್ವೇಷ ರಾಜಕಾರಣಕ್ಕೆ ಕೊನೆಯೇ ಇಲ್ಲ. ಯಾರೂ ಶವದ ಮೇಲೆ ರಾಜಕಾರಣ ಮಾಡಬಾರದು. ಧಾರ್ಮಿಕ ಭಾವನೆಗಳನ್ನು ಕೆರಳಿಸುವುದರಿಂದ ಸಮಾಜಕ್ಕೆ ಹಾನಿಯಾಗುತ್ತದೆ. ಇದರಿಂದ ಯಾರಿಗೂ ಲಾಭವಾಗದು ಎಂದು ಹೇಳಿದ್ದಾರೆ.

RELATED ARTICLES  ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ!

ಮನುಷ್ಯತ್ವ ಇಲ್ಲದವರು ಇಂತಹ ಕೃತ್ಯಗಳನ್ನು ಮಾಡುತ್ತಾರೆ, ಬಶೀರ್ ಸಾವಿನಿಂದ ವೈಯಕ್ತಿಕವಾಗಿ ನೋವಾಗಿದೆ. ಪ್ರಸ್ತುತ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಇಂತಹ ಕೃತ್ಯಗಳನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು.

RELATED ARTICLES  ಪಪ್ಪು ಪದ ಬಳಕೆಗೆ ನಿಷೇಧ ಹೇರಿದ ಚುನಾವಣಾ ಆಯೋಗ!

ಪಕ್ಷಗಳು, ಸಂಘಟನೆಗಳು ಘರ್ಷಣೆಗೆ ಪ್ರಚೋದಿಸಬಾರದು ಎಂದು ಹೇಳಿರುವ ಸಿದ್ದರಾಮಯ್ಯ ಅವರು ಶಾಂತಿ ಕಾಪಾಡುವಂತೆ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.