ಕುಮಟಾ; ತಾಲೂಕಿನಲ್ಲಿರುವ ಕಾರ್ಯಕರ್ತರನ್ನ ಒಗ್ಗೂಡಿಸಿ ಬಿಜೆಪಿ ಪಕ್ಷವನ್ನ ಸಂಘಟಿಸಿ ಕೇಂದ್ರ ಸರಕಾರದ ಯೋಜನೆಗಳನ್ನ ಜನರಿಗೆ ತಿಳಿಸಿ ಹಾಗೂ ಬಡವರಿಗೆ ಸಿಗುವ ಯೋಜನೆಗಳನ್ನು ಆಯಾ ಫಲಾನುಭವಿಗಳಿಗೆ ತಲುಪಿಸುವಂತಹ ಕಾರ್ಯ ನಡೆಯಬೇಕು ಎನ್ನುವ ಉದ್ದೇಶದಿಂದ ಕುಮಟಾದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕಾರಿಣಿ ಸಭೆ ವಿಧಾನ ಪರಿಷತ್ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರತಿ ಬೂತ್‍ ಅನ್ನು ಸಶಕ್ತಿಕರಣಗೊಳಿಸುವ ಮೂಲಕ ಬೂತ್ ಮಟ್ಟದಲ್ಲಿರುವ ಕಮಿಟಿಗಳನ್ನ ಪುನರ್ ರಚನೆ ಮಾಡುವ ಮೂಲಕ ಕುಮಟಾ ತಾಲೂಕಿನ ವಿಧಾನಸಭಾ ಕ್ಷೇತ್ರದ 224ಕ್ಕಿಂತ ಹೆಚ್ಚು ಬೂತ್‍ಗಳಲ್ಲಿ ಕೆಲಸ ಮಾಡುವಂತಹ ಯೋಜನೆಗಳನ್ನ ಬಿಜೆಪಿ ಪಾರ್ಟಿ ಹಮ್ಮಿಕೊಂಡಿದೆ. ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದರು. ಅಲ್ಲದೆ, ಕೇಂದ್ರ ಸರಕಾರದ ಯೋಜನೆಗಳನ್ನ ರಾಜ್ಯ ಸರಕಾರ ತಮ್ಮ ಹೆಸರಿನಲ್ಲಿ ಮಾಡುವಂತಹ ಕೆಲಸವನ್ನು ಕಂಡಾಗ ಆಶ್ಚರ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES  ಅನಾರೋಗ್ಯದ ಕಾರಣ ಜೀವನದಲ್ಲಿ ಜಿಗುಪ್ಸೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

vlcsnap 2018 01 07 16h48m01s19

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ, ಮಾಜಿ ಶಾಸಕರಾದ ದಿನಕರ ಶೆಟ್ಟಿ, ಕುಮಾರ ಮಾರ್ಕಂಡೇಯ, ವೆಂಕಟ್ರಮಣ ಹೆಗಡೆ, ಸುಬ್ರಾಯ ನಾಯ್ಕ, ಗಾಯತ್ರಿ ಗೌಡ, ಹಾಗೂ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು..

RELATED ARTICLES  ವಿಶ್ವ ವಿಖ್ಯಾತ ಮುರುಡೇಶ್ವರದಲ್ಲಿ ಉಮೇಶ ಮುಂಡಳ್ಳಿಯವರ 'ಉತ್ತರ ಕನ್ನಡಕ್ಕೆ ಒಂದು ಸುತ್ತು ' ಪುಸ್ತಕ ಬಿಡುಗಡೆ ಮಾಡಿದ ಪ್ರವಾಸಿಗರು..