ಬೆಂಗಳೂರು: ದೀಪಕ್ ಸಾವಿಗೆ ಬಶೀರ್ ಹತ್ಯೆ ಉತ್ತರವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದಾರೆ.

ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಮಂಗಳೂರಿನ ಬಶೀರ್ ಸಾವಿಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಈ ರೀತಿ ಪ್ರತಿಕ್ರೆಯೆ ನೀಡಿದ್ದಾರೆ.

ಕಣ್ಣಿಗೆ ಕಣ್ಣು ಎಂದಾದರೆ ಪ್ರಪಂಚವೇ ಅಂಧವಾಗುತ್ತದೆ. ದೀಪಕ್ ಹತ್ಯೆಗೆ ಬಶೀರ್ ಸಾವು ಉತ್ತರವಲ್ಲ. ರಾಜ್ಯದಲ್ಲಿ ಶಾಂತಿ ಮರು ಸ್ಥಾಪನೆಗೆ ಕಾಂಗ್ರೆಸ್ ಸರ್ಕಾರಕ್ಕೆ ಉತ್ಸಾಹವಿಲ್ಲ. ಹೀಗಾಗಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಸೌಹಾರ್ದ ಸಭೆ ನಡೆಸುವ ಸಮಯ ಬಂದಿದೆ ಎಂದು ಟ್ವಿಟ್ ಮೂಲಕ ಹೇಳಿದ್ದಾರೆ.

RELATED ARTICLES  ಮೇ 10 ರಿಂದ ಕರ್ನಾಟಕದಲ್ಲಿ ಲಾಕ್ ಡೌನ್ : ಸಿ.ಎಂ‌ ಘೋಷಣೆ

ಜ. 3ರಂದು ಮಂಗಳೂರಿನ ಕುಲೂರು ಸಮೀಪದ ಕೊಟ್ಟಾರ ಚೌಕಿ ಹತ್ತಿರ ದುಷ್ಕರ್ಮಿಗಳು ಬಶೀರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಬಶೀರ್ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಬಶೀರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

RELATED ARTICLES  ಅನಾರೋಗ್ಯದಿಂದ ಬಳಲುತ್ತಿರುವ ಚಲನಚಿತ್ರ ನಟ ದೊಡ್ಡಣ್ಣ . ಆಸ್ಪತ್ರೆಗೆ ದಾಖಲು.