ನವದೆಹಲಿ: ಕಂಪ್ಯೂಟರ್ ಭದ್ರತೆ ಕ್ಷೇತ್ರದ ಪ್ರಮುಖ ಆ್ಯಂಟಿ ವೈರಸ್ ಸಂಸ್ಥೆ ಕ್ವಿಕ್ ಹೀಲ್ ಭಾರತೀಯ ಬ್ಯಾಂಕಿಂಗ್ ಆ್ಯಪ್ ಗಳಲ್ಲಿ ಅಪಾಯಕಾರಿ ಟ್ರಾಜನ್ ವೈರಸ್ ಅನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದೆ.

Android.banker.A2f8a ಎಂಬ ಹೊಸ ಟ್ರಾಜನ್ ವೈರಸ್ ಅನ್ನು ಕ್ಲಿಕ್ ಹೀಲ್ ಪತ್ತೆ ಮಾಡಿದ್ದು, ಈ ಹಿಂದೆ ಇದೇ ವೈರಸ್ Android.banker.A9480 ಎಂಬ ಹೆಸರಿನಲ್ಲಿ ಪ್ರಸರಣವಾಗಿತ್ತು. ಕ್ವಿಕ್ ಹೀಲ್ ಸಂಸ್ಥೆ ಹೇಳಿರುವಂತೆ ಈ Android.banker.A2f8a ಟ್ರಾಜನ್ ವೈರಸ್ ಅನ್ನು ನಕಲಿ ಫ್ಲಾಷ್ ಪ್ಲೇಯರ್ ಆ್ಯಪ್ ನ ಮೂಲಕ ಪ್ರಸರಣ ಮಾಡಲಾಗುತ್ತಿದ್ದು, ಥರ್ಡ್ ಪಾರ್ಟಿ ಸ್ಟೋರ್ ಗಳಿಂದ ಅಂದರೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ನಿಂದ ಅಲ್ಲದೇ ಇತರೆ ಮೂಲಗಳಿಂದ ಡೌನ್ ಲೋಡ್ ಮಾಡಿಕೊಳ್ಳುವಾಗ ಈ ವೈರಸ್ ಪ್ರಸಾರವಾಗುತ್ತದೆ ಎಂದು ಹೇಳಿದೆ.

RELATED ARTICLES  ಹಿಂದೂ ರಕ್ಷಣಾ ಸಮಿತಿ ವತಿಯಿಂದ ದಿ. ಪರೇಶ್ ಮೇಸ್ತರ ವಾರ್ಷಿಕ ಪುಣ್ಯ ಸ್ಮರಣೆ : ಕಾರ್ಯಕ್ರಮದಲ್ಲಿ ಶಾಸಕರುಗಳ ಉಪಸ್ಥಿತಿ.

ಒಮ್ಮೆ ಇದು ಮೊಬೈಲ್ ಗೆ ಡೌನ್ ಲೋಡ್ ಆದ ಬಳಿಕ ಇದು ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೇಲೆ ನಿರಂತರವಾಗಿ ಕಣ್ಣಿಟ್ಟಿರುತ್ತದೆ. ಆ ಮೂಲಕ ನಮ್ಮ ಪ್ರತೀ ವಹಿವಾಟು ಮಾಹಿತಿ ಪಾಸ್ ವರ್ಡ್ ಗಳನ್ನು ಸಂಗ್ರಹಿಸುತ್ತದೆ. ಅಲ್ಲದೆ ಕೇವಲ ಬ್ಯಾಂಕಿಂಗ್ ಆ್ಯಪ್ ಗಳು ಮಾತ್ರವಲ್ಲದೇ ಸಂತ್ರಸ್ಥ ಮೊಬೈಲ್ ಗೆ ಇನ್ ಸ್ಟಾಲ್ ಅಗುವ ಪ್ರತೀಯೊಂದು ಆ್ಯಪ್ ಗಳನ್ನು ಈ ಟ್ರಾಜನ್ ವೈರಸ್ ವೀಕ್ಷಣೆಗೆ ಒಳಪಡಿಸಲಿದೆಯಂತೆ. ಕ್ವಿಕ್ ಹೀಲ್ ಮಾಹಿತಿ ನೀಡಿರುವಂತೆ ದೇಶದ ಪ್ರಮುಖ ಬ್ಯಾಂಕ್ ಗಳ ಆ್ಯಪ್ ಗಳೂ ಸೇರಿದಂತೆ ಸುಮಾರು 232 ಬ್ಯಾಂಕಿಂಗ್ ಆ್ಯಪ್ ಗಳು ಮತ್ತು ಕ್ರಿಪ್ಟೋ ಕರೆನ್ಸಿ ಆ್ಯಪ್ ಗಳ ಮೇಲೆ ಈ ಟ್ರಾಜನ್ ವೈರಸ್ ದಾಳಿ ಮಾಡಿದೆ.

RELATED ARTICLES  ಮೇರಾ ಭಾರತ ಪ್ರತಿಷ್ಠಾನದಿಂದ ಹೊಸಗದ್ದೆ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ

ಒಮ್ಮೆ ಈ ಟ್ರಾಜನ್ ವೈರಸ್ ಇನ್ ಸ್ಟಾಲ್ ಆದ ಬಳಿಕ ಸುಖಾಸುಮ್ಮನೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ನೋಟಿಫಿಕೇಶನ್ ಗಳನ್ನು ರವಾನೆ ಮಾಡುತ್ತಿರುತ್ತದೆ. ಮೊಬೈಲ್ ಬಳಕೆದಾರರು ಅದು ಬ್ಯಾಂಕಿಂಗ್ ಆ್ಯಪ್ ನಿಂದ ಬರುತ್ತಿರುವ ನೋಟಿಫಿಕೇಷನ್ ಗಳು ಎಂದು ತಪ್ಪು ಭಾವಿಸುತ್ತಾರೆ. ಈ ಸಂದರ್ಭದಲ್ಲಿ ಬಳಕೆದಾರರು ಆ್ಯಪ್ ಗೆ ಲಾಗಿನ್ ಆದರೆ ಗ್ರಾಹಕರ ಪಾಸ್ ವರ್ಡ್ ಮತ್ತು ಲಾಗಿನ್ ಐಡಿ ಸೇರಿದಂತೆ ರಹಸ್ಯ ಮತ್ತು ಅತ್ಯಮೂಲ್ಯ ಮಾಹಿತಿಗಳನ್ನು ಈ ಟ್ರಾಜನ್ ವೈರಸ್ ಕದಿಯುತ್ತದೆ ಎಂದು ಕ್ವಿಕ್ ಹೇಳಿಕೊಂಡಿದೆ.