ಕಾರವಾರ: ಗೌಡ ಸಾರಸ್ವತ ಸಮಾಜವು ಒಗ್ಗಟ್ಟಿನಿಂದ ಸಮಾಜದ ಅಸಹಾಯಕರಿಗೆ ಸಹಾಯ ಹಸ್ತ ನೀಡುವ ಮೂಲಕ ಸಶಕ್ತ ಸಮಾಜ ನಿರ್ಮಿಸಿ ಸದೃಢ ದೇಶ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉದ್ಯಮಿ ಹಾಗೂ ಸಮಾಜಸೇವಕ ವಿನೋದ ಪ್ರಭು ಕರೆ ನೀಡಿದರು.

RELATED ARTICLES  ಬೀದಿ ಬದಿಯ ಜಾನುವಾರುಗಳನ್ನು ಕದ್ದು ಸಾಗಿಸುತ್ತಿದ್ದ ಆರೋಪ : ಇನ್ನೋರ್ವ ಅರೆಸ್ಟ್..!

ತಾಲೂಕಾ ಜಿಎಸ್‌ಬಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಹಣಕಾಸು, ತಂತ್ರಜ್ಞಾನ, ರಾಜಕೀಯ ಹಾಗೂ ಕಲಾ ಕ್ಷೇತ್ರಕ್ಕೆ ಜಿಎಸ್‌ಬಿ ಸಮಾಜ ಮಹತ್ವದ ಕಾಣಿಕೆ ನೀಡಿದೆ. ದೇಶದ ಸ್ವಾತಂತ್ರಕ್ಕೂ ಮುಂಚೆ ಸಮಾಜವು ಕರಾವಳಿ ಭಾಗದಲ್ಲಿ ಸ್ಥಾಪಿಸಿದ ಅನೇಕ ಶೈಕ್ಷಣಿಕ ಹಾಗೂ ಹಣಕಾಸು ಸಂಸ್ಥೆಗಳು ಇಂದು ಇಡೀ ದೇಶದಲ್ಲೇ ಮಾದರಿ ಸಂಸ್ಥೆಗಳಾಗಿವೆ ಎಂದು ಶ್ಲಾಘಿಸಿದರು.

RELATED ARTICLES  ಬಣ ರಾಜಕಾರಣಕ್ಕೆ ಗುಡ್ ಬೈ! ಚುನಾವಣೆ ಗೆಲುವಿಗೆ ಒಗ್ಗಟ್ಟಿನ ಮಂತ್ರ ಜಪಿಸಿದ ಶಿವಾನಂದ ಹೆಗಡೆ ಹಾಗೂ ಶಾರದಾ ಶೆಟ್ಟಿ!

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರಾಮನಾಥ ಭಟ್‌, ರಾಜೇಶ ನಾಯಕ, ಜಿ.ಪಿ.ಕಾಮತ್‌ ಉಪಸ್ಥಿತರಿದ್ದರು.