ಕಾರವಾರ: ಅರಣ್ಯ ಅಭಿವೃದ್ಧಿ ಹೆಸರಿನಲ್ಲಿ ನಾಟಾ ಖರೀದಿ ವ್ಯವಹಾರದಲ್ಲಿ ಕೋಟಿಗಟ್ಟಲೇ ಹಣ ವಸೂಲಿ ಮಾಡುತ್ತಿದ್ದ ಅರಣ್ಯ ಇಲಾಖೆಯ ಕಾರ್ಯಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ದಾಂಡೇಲಿಯ ಪ್ರೇಮ್‌ ವುಡ್‌ ಡೆಕೋರ್ಸ್‌ ಮಾಲೀಕ ಪ್ರೇಮಾನಂದ ಗವಾಸ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಅರಣ್ಯ ಇಲಾಖೆ ತಮ್ಮ ಡಿಪೋಗಳಲ್ಲಿ ಸಂಗ್ರಹವಾಗುವ ಕಟ್ಟಿಗೆ ನಾಟಾಗಳನ್ನು ಇ– ಟೆಂಡರ್‌ ಮೂಲಕ ಹರಾಜು ಮಾಡುತ್ತದೆ. ಈ ವೇಳೆ ಅರಣ್ಯ ಅಭಿವೃದ್ಧಿ ತೆರಿಗೆ (ಎಫ್‌ಡಿಟಿ) ಹೆಸರಿನಲ್ಲಿ ಕಳೆದ 30 ವರ್ಷಗಳಿಂದ ಶೇ 8ರಷ್ಟು, ಕೆಲ ಸಮಯದ ಬಳಿಕ ಅದನ್ನು ಅರಣ್ಯ ಅಭಿವೃದ್ಧಿ ಶುಲ್ಕ (ಎಫ್‌ಡಿಎಫ್) ಎಂದು ಬದಲಿಸಿ ಶೇ 12ರಷ್ಟು ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಿತ್ತು.. ಆದರೆ ಸಂದಾಯವಾಗುವ ಈ ಹಣದಲ್ಲಿ ಅವರು ಯಾವ ರೀತಿ ಅಭಿವೃದ್ಧಿ ಮಾಡುತ್ತಿದ್ದಾರೆ. ಹಣ ಯಾರ ಕೈ ಸೇರುತ್ತಿದೆ ಎಂಬ ಕುರಿತು ಮಾಹಿತಿ ಇಲ್ಲ. ಈಗಾಗಲೇ ಅಭಿವೃದ್ಧಿಗಾಗಿ ಸರ್ಕಾರದಿಂದ ಇಲಾಖೆಗೆ ಅನುದಾನ ಬರುತ್ತದೆ. ಹಾಗಿದ್ದರೂ ಕೂಡ ಅಭಿವೃದ್ಧಿ ಹೆಸರಿನಲ್ಲಿ ಹಣ ಸಂದಾಯ ಮಾಡುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

RELATED ARTICLES  ಮಹಿಳೆಯರಿಗೆ ಕುಟುಂಬ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ.

ಹಳಿಯಾಳ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ದಾಂಡೇಲಿ ಮರಮುಟ್ಟು ಸಂಗ್ರಹಾಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಪ್ರತಿವಾದಿಗಳನ್ನಾಗಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ಈ ಬಗ್ಗೆ ಕೆಲವರೊಂದಿಗೆ ಸೇರಿ 2017ರ ಡಿ.12 ರಂದು ರಿಟ್ ಅರ್ಜಿ ಹಾಕಿದ್ದೆವು. ಅದನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್.ಮುದ್ಗಲ್ ಅವರು, ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಡಿ.14 ರಂದು ತಡೆಯಾಜ್ಞೆ ನೀಡಿದರು’ಎಂದು ತಿಳಿಸಿದರು.

RELATED ARTICLES  ರಂಗಮಹೊತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಂಪನ್ನ

ಅರಣ್ಯ ಕಟ್ಟಿಗೆ ಖರೀದಿದಾರರಾದ ನಾರಾಯಣ ಪಟೇಲ್, ಅಶೋಕ ಸಾಳಸ್ಕರ್, ಮಹೇಶರ್ ನಾಯ್ಕ ಉಪಸ್ಥಿತರಿದ್ದರು.