ಕುಮಟಾ :ತಾಲೂಕಿನ ಮಣಕಿ ಮೈದಾನದಲ್ಲಿ 8 ದಿನಗಳ ಕಾಲ ನಡೆದ ರವಿರಾಜ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯವಾಗಿದ್ದು ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವಜಿತ್ ನಾಯಕ ಮಾಲಿಕತ್ವದ Raj XI ಅಂಕೋಲಾ ತಂಡವು ವಿನಾಯಕ ಶೆಟ್ಟಿ ಮಾಲಿಕತ್ವದ Blue Boys ಕುಮಟಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Blue boys ಕುಮಟಾ ತಂಡ ದ್ವಿತೀಯ ಸ್ಥಾನ ಪಡೆಯಿತು.ಉತ್ತಮ ಬ್ಯಾಟ್ಸ್‌ಮನ್‌ ಅಂಕೋಲಾ ತಂಡದ ಫೈಜಲ್,ಉತ್ತಮ ಬೌಲರ್ ಅಂಕೋಲಾ ತಂಡದ ರಫೀಕ್,ಉತ್ತಮ ವಿಕೆಟ್ ಕೀಪರ್ ಆಗಿ blue boys ಕುಮಟಾ ತಂಡದ ಸಚಿನ್ ಹಾಗೂ ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅಂಕೋಲಾ ತಂಡದ ಸತೀಶ್ ಅವರು ಪಡೆದುಕೊಂಡರು.

RELATED ARTICLES  ಬಸ್ ಚಾಲಕನ ಮೇಲೆ ಹಲ್ಲೆ.

ಅಂತಿಮವಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕರು‌ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ದಿನಕರ ಶೆಟ್ಟಿ, ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಕೆ ಶೆಟ್ಟಿ,ಪುರಸಭಾ ಅಧ್ಯಕ್ಷರಾದ ಮಧುಸೂಧನ ಶೇಟ್, ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ನ ಅಧ್ಯಕ್ಷರು ಬಿಜೆಪಿ ಮುಖಂಡರೂ ಆದ ನಾಗರಾಜ ನಾಯಕ ತೊರ್ಕೆ, ಮಾಜಿ ಪುರಸಭಾ ಅಧ್ಯಕ್ಷ ಸಂತೋಷ ನಾಯ್ಕ ಇನ್ನಿತರ ಪ್ರಮುಖರು ಹಾಜರಿದ್ದರು.

RELATED ARTICLES  ಅಭಯಾಕ್ಷರಕ್ಕೆ ಸಹಿ ನೀಡಿ ಆಶೀರ್ವದಿಸಿದ ಕರ್ಕಿ ಶ್ರೀಗಳು