ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಚಂದ್ರಗಿರಿ ವಲಯ ಸಭೆಯು ಬಜೆ ಘಟಕದ ಕೋಡಿ ಶ್ರೀ ಕೃಷ್ಣ ಕುಮಾರ ಇವರ ನಿವಾಸದಲ್ಲಿ ಜರಗಿತು.

ಘಟಕ ಅಧ್ಯಕ್ಷರಾದ ರಾಮಚಂದ್ರ ಭಟ್ಬ ಬಜೆ ಅವರು ಧ್ವಜಾರೋಹಣ ಮಾಡಿದರು. ಶಂಖನಾದ ಗುರುವಂದನೆ ಗೋವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು.
ವಲಯ ಅಧ್ಯಕ್ಷ ಬಾಲಕೃಷ್ಣ ಅಮ್ಮಂಗಲ್ಲು ಪ್ರಸ್ಥಾವನಾ ಮಾತುಗಳನ್ನಾಡಿ ಗತ ಸಭೆಯ ವರದಿಮಂಡಿಸಿ ಸಭಾ ನಿರ್ವಹಣೆ ಮಾಡಿದರು.

RELATED ARTICLES  ಲಿಂಗಾಯತ ಪ್ರತ್ಯೇಕ ಧರ್ಮ : ಸರಕಾರಕ್ಕೆ ಗಡವು ನೀಡಿದ ಮಾತೆ ಮಹಾದೇವಿ

ಗುರುವಂದನೆ, ಬೆಳೆಸಮರ್ಪಣೆ, ಚಂದ್ರಮೌಳೀಶ್ವರ ದೇವಾಲಯದ ಬ್ರಹ್ಮಕಲಶೊತ್ಸವ, ಅಭಯಾಕ್ಷರ ಈ ವಿಚಾರಗಳ ಕುರಿತು ಸಮಾಲೋಚನೆಯಾಯಿತು.
ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ ಅವರು ವಿದ್ಯಾರ್ಥಿ ಶಿಬಿರ, ಪರೀಕ್ಷೆ ನಿರೀಕ್ಷೆ, ವಿದ್ಯಾನಿಧಿ ವಿಷಯಗಳ ಬಗ್ಗೆ ವಿಷಯ ವಿಸ್ತಾರ ಮಾಡಿದರು. ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ ಅವರು ಅಭಯಾಕ್ಷರ, ರಕ್ತಾಕ್ಷರ ವಿಚಾರಗಳ ಕುರಿತು ಮಾಹಿತಿಗಳನ್ನಿತ್ತರು .
ವಲಯ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ತಿತರಿದ್ದರು. ರಾಮಮಂತ್ರ, ಧ್ಯಾನ, ಶಾಂತಿಮಂತ್ರ , ಧ್ವಜಾವರೋಹಣ, ಶಂಖನಾದವಾಗಿ ಸಭೆ ಮುಕ್ತಾಯವಾಯಿತು.

RELATED ARTICLES  ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿಯವರು ಹೃದಯಘಾತದಿಂದ ನಿಧನ.