ಬೆಂಗಳೂರು/ಮೈಸೂರು: ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಗಂಭೀರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ದೀಪಕ್ ಹತ್ಯೆಗೆ ಮಂಗಳೂರಿನ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಸುಪಾರಿ ಕೊಟ್ಟಿರುವುದಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೀಪಕ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಸುಪಾರಿ ಕೊಟ್ಟಿದ್ದು, ಈ ವಿಷಯ ಸರ್ಕಾರಕ್ಕೂ ತಿಳಿದಿದೆ. ಆದರೆ ಸತ್ಯ ಬಹಿರಂಗಪಡಿಸುತ್ತಿಲ್ಲ ಎಂದು ಹೇಳಿದರು.

RELATED ARTICLES  ಉತ್ತರ ಕನ್ನಡದ ಪ್ರತಿಭೆಗೆ ಅಮೇರಿಕಾದ ಲ್ಯುಸಿಯಾನಾ ವಿಶ್ವವಿದ್ಯಾಲಯದಿಂದ ಗೌರವ

ಎಚ್ ಡಿಕೆಗೆ ಆರ್.ಅಶೋಕ್ ತಿರುಗೇಟು:

ದೀಪಕ್ ರಾವ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಸುಪಾರಿ ಕೊಟ್ಟಿದ್ದಾರೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಾಂಬ್ ಸಿಡಿಸಿದ ಬೆನ್ನಲ್ಲೇ, ದೀಪಕ್ ಹತ್ಯೆಗೆ ಎಸ್ ಡಿಪಿಐ ನಿಂದ 50 ಲಕ್ಷ ರೂ. ಸುಪಾರಿ ನೀಡಲಾಗಿದೆ ಎಂದು ಮಾಜಿ ಡಿಸಿಎಂ, ಬಿಜೆಪಿ ಮುಖಂಡ ಆರ್.ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ.

RELATED ARTICLES  ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿದಿ ಭೂಕಂಪನದಿಂದ ಸುರಕ್ಷಿತವಾಗಿಲ್ಲ : ತಜ್ಞರ ಎಚ್ಚರಿಕೆ

ಎಸ್ ಡಿಪಿಐ ಜತೆ ಕಾಂಗ್ರೆಸ್ ಗೆ ಲವ್ ಇದೆ. ಎಸ್ ಡಿಪಿಐ ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಇಂತಹ ಕೃತ್ಯ ಎಸಗುತ್ತಿರುವುದಾಗಿ ದೂರಿದರು.