ಮಂಗಳೂರು:ಎರಡು ಕೈದಿಗಳ ಗುಂಪಿನ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೊಡಿಯಾಲ್ ಬೈಲ್ ಸೆಂಟ್ರಲ್ ಜೈಲಿನಲ್ಲಿ ಸೋಮವಾರ ನಡೆದಿದ್ದು, ಓರ್ವ ಕೈದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕೊಡಿಯಾಲ್ ಬೈಲ್ ಸೆಂಟ್ರಲ್ ಜೈಲಿನಲ್ಲಿ ಎರಡು ಕೈದಿಗಳ ತಂಡದ ನಡುವೆ ಟ್ಯೂಬ್ ಲೈಟ್, ರಾಡ್ ಗಳಿಂದ ಹೊಡೆದಾಡಿಕೊಂಡಿರುವುದಾಗಿ ವರದಿ ಹೇಳಿದೆ. ಗಾಯಾಳು ಕೈದಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಮುಳ್ಳೇರಿಯಾ ಮಂಡಲ ಸಭೆ ಸುಳ್ಯ ಧರ್ಮಾರಣ್ಯದಲ್ಲಿ

ಜೈಲಿನ ಒಳಗೆ ಪೊಲೀಸರು ಲಾಠಿಚಾರ್ಜ್ ನಡೆಸಿ ಕೈದಿಗಳ ನಡುವಿನ ಹೊಡೆದಾಟವನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದ್ದು, ಯಾವ ವಿಚಾರಕ್ಕಾಗಿ ಉಭಯ ತಂಡಗಳ ನಡುವೆ ಹೊಡೆದಾಟ ನಡೆಯಿತು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

RELATED ARTICLES  ಬಸ್ ತಂಗುದಾಣದ ಹಿಂಬದಿಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ.