ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರ ಆಶ್ರಯದಲ್ಲಿ ಜನವರಿ 27ರಿಂದ 31ರ ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ 9ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -9 ನಡೆಯಲಿದೆ ಎಂದು ಇಡುಗುಂಜಿ ಮೇಳದ ನಿರ್ದೇಶಕರಾದ ಶಿವಾನಂದ ಹೆಗಡೆ ಕೆರೆಮನೆಯವರು ತಿಳಿಸಿದ್ದಾರೆ.

ಈ ವರ್ಷ ಏನೇನು ವಿಶೇಷ?

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಒಂಬತ್ತನೇ ವರುಷಕ್ಕೆ ಕಾಲಿಡುತ್ತಿದೆ. ಪ್ರತಿವರುಷದಂತೆ ಈ ವರುಷವೂ ದೇಶದ ನಾನಾಭಾಗಗಳಿಂದ ವಿವಿಧ ಕಲಾತಂಡಗಳು ಭಾಗವಹಿಸುತ್ತಿವೆ. ಮೇರು ನಟ ಕೆರೆಮನೆ ಶಂಭು ಹೆಗಡೆಯವರು ದಿವಂಗತರಾದಾಗಿನಿಂದ ಅಂದರೆ 2009ರಿಂದ ಮಂಡಳಿ ಅವರ ನೆನಪಿನಲ್ಲಿ ಈ ವಿಶಿಷ್ಟವಾದ ನಾಟ್ಯೋತ್ಸವ ನಡೆಸಿಕೊಂಡು ಬರುತ್ತಿದ್ದು, ಐದು ದಿನಗಳ ಕಾಲ ಗುಣವಂತೆಯ ‘ಯಕ್ಷಾಂಗಣ’ದಲ್ಲಿ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ದಿ: 27-01-2018 ರಂದು ಸಂಜೆ 5 ಗಂಟೆಗೆ ಮಾನ್ಯ ಕೇಂದ್ರ ಮಂತ್ರಿಗಳಾದ ಶ್ರೀ ಅನಂತಕುಮಾರ್ ಹೆಗಡೆ, ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು, ಭಾರತ ಸರಕಾರ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಶ್ರೀ ಮಂಕಾಳ ವೈದ್ಯ, ಮಾನ್ಯ ವಿಧಾನಸಭಾ ಸದಸ್ಯರು, ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ, ಶ್ರೀ ನಳಿನಕುಮಾರ ಕಟೀಲು, ಮಂಗಳೂರು, ಮಾನ್ಯ ಸಂಸದರು, ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ವಿಧಾನಸಭಾ ಸದಸ್ಯರು, ಶಿರಸಿ, ಶ್ರೀ ಎಸ್. ಎಸ್. ನಕುಲ (IAS), ಮಾನ್ಯ ಜಿಲ್ಲಾಧಿಕಾರಿಗಳು, ಕಾರವಾರ, ಶ್ರೀ ಹರಿಪ್ರಕಾಶ ಕೋಣೆಮನೆ, ಬೆಂಗಳೂರು, ಹಿರಿಯ ಪತ್ರಕರ್ತರು, ಪ್ರೊ. ಕೆ. ಇ. ರಾಧಾಕೃಷ್ಣ, ಬೆಂಗಳೂರು, ಶಿಕ್ಷಣ ತಜ್ಞರು ಮತ್ತು ಸಾಹಿತಿಗಳು ಇವರು ಭಾಗವಹಿಸಲಿದ್ದಾರೆ. ಉಳಿದ ದಿನಗಳಲ್ಲಿ ಶ್ರೀ ಕೆ. ಎಂ. ಉಡುಪ, ಮಂದಾರ್ತಿ, ಶ್ರೀ ಶಶಿಧರ ಭಟ್, ಡಾ. ನಾರಾಯಣ ಸಭಾಹಿತ, ಶ್ರೀ ನಾಗರಾಜಮೂರ್ತಿ ಬೆಂಗಳೂರು, ಶ್ರೀ ಶ್ರೀಪಾದ, ಶಿವಮೊಗ್ಗ, ಶ್ರೀ ಸಂತೋಷಕುಮಾರ್ ಮೆಹಂದಳೆ, ಡಾ. ನಿರಂಜನ ವಾನಳ್ಳಿ, ಶ್ರೀ ರವೀಂದ್ರ ಭಟ್ ಐನಕೈ, ಶ್ರೀ ಈಶ್ವರ ನಾಯ್ಕ ಮುರ್ಡೇಶ್ವರ, ಶ್ರೀ ಸೂರಾಲು ದೇವಿಪ್ರಸಾದ ತಂತ್ರಿ, ಶ್ರೀ ಎಂ. ವಿ. ಹೆಗಡೆ, ಕೆರೆಮನೆ, ಶ್ರೀ ಕೃಷ್ಣಮೂರ್ತಿ ಭಟ್ ಶಿವಾನಿ, ಶ್ರೀ ಶಂಭು ಗೌಡ ಅಡಿಮನೆ, ಶ್ರೀ ಜಿ. ಎಸ್. ಭಟ್ ಮೈಸೂರು, ಶ್ರೀ ವಿ. ಆರ್. ಗೌಡ, ಶ್ರೀಮತಿ ದೇವಿ ಮಹಾಬಲ ಗೌಡ, ಡಾ. ವಸಂತಕುಮಾರ ಪೆರ್ಲ, ಶ್ರೀ ಎಂ. ಎಂ. ಪ್ರಭಾಕರ ಕಾರಂತ, ಶ್ರೀ ಕೆ.ವಿ. ರಮಣ ಮಂಗಳೂರು, ಶ್ರೀ ನರಸಿಂಹ ಪಂಡಿತ ನಿಲೇಕೇರಿ, ಶ್ರೀ ಗಣಪಯ್ಯ ಎಂ. ಗೌಡ ಹೆಬ್ಬಾರಹಿತ್ಲ, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಮಂಗಳೂರು, ಶ್ರೀ ಎಂ. ಎನ್. ಮಂಜುನಾಥ, ಶ್ರೀ ಹೇಮಂತರಾಜು, ಪೆÇ್ರ. ವರದೇಶ ಹಿರೆಗಂಗೆ, ಶ್ರೀ ಜಯರಾಮ ಹೆಗಡೆ, ಶ್ರೀ ಸುರೇಂದ್ರ ವಾಗ್ಲೆ, ಡಾ. ರವಿ ಹೆಗಡೆ ಹೂವಿನಮನೆ, ಶ್ರೀ ಗಣಪಯ್ಯ ಗೌಡ ಮುಗಳಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

RELATED ARTICLES  ಕಾಡುಕುರಿ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದವನ ಬಂಧನ.

Day 4 Kathak

ಉದ್ಘಾಟನಾ ಸಮಾರಂಭದಂದು ಜಿಲ್ಲೆಯ ಸುಪ್ರಸಿದ್ಧ ಹಾಗೂ ಐತಿಹಾಸಿಕ ಮೇಳವಾದ ಕರ್ಕಿಯ ಶ್ರೀ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿಗೆ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಕೊನೆಯ ದಿನ ದಿ: 31-01-2018 ರಂದು ಯಕ್ಷಗಾನದ ಸುಪ್ರಸಿದ್ಧ ಸ್ತ್ರೀ ವೇಷಧಾರಿ ದಿ. ಗಜಾನನ ಹೆಗಡೆಯವರ ನೆನಪಿನಲ್ಲಿ ಸ್ಥಾಪಿತವಾದ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ, ಪ್ರಖ್ಯಾತ ಕಲಾವಿದರಾದ ಶ್ರೀ ಗೋಡೆ ನಾರಾಯಣ ಹೆಗಡೆ ಇವರಿಗೆ ಪ್ರದಾನ ಮಾಡಲಾಗುವುದು. ಪ್ರತಿದಿನ ಸಂಜೆ 6.30ಕ್ಕೆ ದೇಶದ ವಿವಿಧ ಭಾಗಗಳಿಂದ ಬಂದ ಸುಪ್ರಸಿದ್ಧ ಕಲಾವಿದರ ಕಲಾಪ್ರದರ್ಶನ ಸಂಜೆ ನಡೆಯಲಿದೆ. ಅಲ್ಲದೇ ದಿ: 28-01-2018 ರಂದು ಬೆಳಿಗ್ಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಶ್ರೀ ಕೆ. ವಿ. ಸುಬ್ಬಣ್ಣ ಇವರ ಕುರಿತ ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿ, ದಿ: 29 ರಂದು ಬೆಳಿಗ್ಗೆ ಶ್ರೀ ಕಡತೋಕ ಮಂಜುನಾಥ ಭಾಗವತರು ಹಾಗೂ ಶ್ರೀ ಹಾರಾಡಿ ಕುಷ್ಟ ಗಾಣಿಗರ ಕುರಿತ ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿ, ದಿ: 30 ರಂದು ಬೆಳಿಗ್ಗೆ ಶ್ರೀ ವೆಂಕಟೇಶ ಶರ್ಮಾ, ಬೆಂಗಳೂರು, ಕರ್ನಾಟಕೀ ಮತ್ತು ಹಿಂದೂಸ್ಥಾನಿ ಸಂಗೀತಗಾರರು ಇವರಿಂದ ‘ಯಕ್ಷಗಾನ ಸಂಗೀತಕ್ಕೆ ಶಾಸ್ತ್ರೀಯ ಸಂಗೀತದ ತಳಹದಿ’ ಈ ಕುರಿತ ಯಕ್ಷಗಾನ ಸಂಗೀತ ಗೋಷ್ಠಿ, ಕೊನೆಯ ದಿನ ದಿ: 31 ರಂದು ಬೆಳಿಗ್ಗೆ ಶಾಲಾ ಮಕ್ಕಳಿಗಾಗಿ ಕಿನ್ನರ ಮೇಳ, ತುಮರಿ, ಸಾಗರ ಇವರಿಂದ ‘ಅದಲು ಬದಲು’ ನಾಟಕ ಪ್ರದರ್ಶನ ನಡೆಯಲಿದೆ. ದೇಶದ ಪ್ರಸಿದ್ಧ ತಂಡಗಳಿಂದ ಕಥಕ್, ಭರತನಾಟ್ಯ, ತೆರುಕುತ್ತು, ಗುಜರಾತಿನ ಜಾನಪದ ನೃತ್ಯಗಳು, ಯಕ್ಷಗಾನ, ನಾಟಕ, ಸಂಗೀತ ಮುಂತಾದವು ನಡೆಯಲಿದ್ದು ಸುಮಾರು 9 ವಿವಿಧ ಕ್ಷೇತ್ರದ ಸಾಧಕರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸದಾಶಿವ ಹೆಗಡೆ ನೀಲೆಕೇರಿ, ಶ್ರೀ ಪೆರವೊಡಿ ನಾರಾಯಣ ಭಟ್, ಪುತ್ತೂರು, ಯಕ್ಷಗಾನ ಚಿಂತಕರು, ಬರಹಗಾರರು, ವಿಮರ್ಶಕರೂ ಆದ ಡಾ. ಆನಂದರಾಮ ಉಪಾಧ್ಯಾಯ, ಬೆಂಗಳೂರು,
ಕರಿಕಾನ ಪರಮೇಶ್ವರಿ ದೇವಸ್ಥಾನ, ಅರೆಅಂಗಡಿಯ ಪ್ರಧಾನ ಅರ್ಚಕರಾದ ಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಭಟ್, ವಿಮರ್ಶಕರು, ಲೇಖಕರು ಶ್ರೀ ಅನಂತ ವೈದ್ಯ, ಯಲ್ಲಾಪುರ, ಚಿತ್ರ ಕಲಾವಿದರಾದ ಶ್ರೀ ಜಿ. ಎಂ. ಹೆಗಡೆ ತಾರಗೋಡು, ಶಿರಸಿ, ಯಕ್ಷಗಾನ ಕಲಾವಿದರು ಹಾಗೂ ವಿದ್ವಾಂಸರಾದ ಶ್ರೀ ಅತ್ತಿಮುರುಡು ವಿಶ್ವೇಶ್ವರ ಹೆಗಡೆ, ಸಿದ್ದಾಪುರ, ಯಕ್ಷಗಾನದ ಪ್ರಸಿದ್ಧ ಚಂಡೆ ವಾದಕರಾದ ಶ್ರೀ ವೆಂಕಪ್ಪ ಭಂಡಾರಿ, ಗುಣವಂತೆ, ಶ್ರೀ ಮೂರೂರು ವಿಷ್ಣು ಭಟ್, ಕುಮಟಾ, ಯಕ್ಷಗಾನ ಕಲಾವಿದರು ಇವರೆಲ್ಲರೂ ಸಮ್ಮಾನವನ್ನು ಸ್ವೀಕರಿಸಲಿದ್ದಾರೆ.

RELATED ARTICLES  ಅಕ್ರಮ ಗಾಂಜಾ ಮಾರಾಟ ಯತ್ನ ಆರೋಪಿ ಪೊಲೀಸ್ ಬಲೆಗೆ.

Day 4 Sapta Tandava dance

ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ರಾಜಕಾರಣಿಗಳು, ಕಲಾವಿದರು, ಚಿಂತಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರುಷದಿಂದ ಆರಂಭಿಸಿದ ‘ಶ್ರೀಮಯ ಕಲಾಪೋಷಕ ಪ್ರಶಸ್ತಿ’ ವಿವಿಧ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಶ್ರೀ ಡಾ. ಆರ್. ವಿ. ರಾಘವೇಂದ್ರ, ಮುಖ್ಯಸ್ಥರು, ಅನನ್ಯ ಸಂಸ್ಥೆ, ಬೆಂಗಳೂರು, ಶ್ರೀ ಜಿ. ಎಸ್. ಹೆಗಡೆ, ಸಂಚಾಲಕರು, ‘ಸಪ್ತಕ’, ಬೆಂಗಳೂರು, ಶ್ರೀ ಹಾದಿಗಲ್ಲು ಲಕ್ಷ್ಮೀನಾರಾಯಣ, ಶ್ರೀ ಅಭಯಲಕ್ಷ್ಮೀನರಸಿಂಹ ದೇವಸ್ಥಾನ, ತೀರ್ಥಹಳ್ಳಿ, ಶ್ರೀ ವಿ.ಆರ್. ಶಾಸ್ತ್ರಿ, ಕಲಾ ಪೋಷಕರು, ಹೊನ್ನಾವರ ಇವರಿಗೆ ನೀಡಲಾಗುತ್ತಿದೆ.

ಹೀಗೆ ಐದು ದಿನ ವಿಶೇಷವಾಗಿ ಸಾಂಸ್ಕೃತಿಕ ಸಂಗತಿಗಳಿಂದ ತುಂಬಿಕೊಂಡ ಈ ಕಾರ್ಯಕ್ರಮ ಇಡೀ ದೇಶದಲ್ಲಿ ವಿಶಿಷ್ಟವಾಗಿ ತನ್ನನ್ನ ಗುರುತಿಸಿಕೊಂಡು ಪ್ರತಿಷ್ಠಿತ ಸಾಂಸ್ಕೃತಿಕ ಕಾರ್ಯಕ್ರಮ ಎನಿಸಿಕೊಂಡಿದೆ.