ಗೋಕರ್ಣ: ಪ ಪೂಶ್ರೀ ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳು , ಶ್ರೀ ಫಕ್ಕೀರೇಶ್ವರ ಸರ್ವಧರ್ಮ ಸಮನ್ವಯ ಭಾವೈಕ್ಯ ಪೀಠ , ಶಿರಹಟ್ಟಿ , ಗದಗ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 366 ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಕವಲಕ್ಕಿಯಲ್ಲಿ ಬಹುಮಾನ ವಿತರಣೆ ಮತ್ತು ಸ್ಮಾರ್ಟ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ಸಂಪನ್ನ.

ಉಪಾಧಿವಂತ ಮಂಡಳಿ ಸದಸ್ಯರು, ಎ ಪಿ ಎಂ ಸಿ ಸದಸ್ಯರೂ ಆದ ಶ್ರೀ ರಮೇಶ ಪ್ರಸಾದ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಸಂತ ಸೇವಕ ಸಮಿತಿಯ ಉಪಾಧ್ಯಕ್ಷ ಶ್ರೀ ವಿ ಡಿ ಭಟ್ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಭಾಗವಹಿಸಿದ್ದರು . ವೇ. ರಾಮಚಂದ್ರ ಜಂಭೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಅಕ್ರಮ ಗಾಂಜಾ ಮಾರಾಟಕ್ಕೆ ಪ್ರಯತ್ನ : ಇಬ್ಬರ ಬಂಧನ