ಕುಮಟಾ: ತಾಲೂಕಿನ ಅಳ್ವೇದಂಡೆಯಲ್ಲಿ ಗಣಪತಿ ಹಾಗೂ ಲಕ್ಷ್ಮಣ ಬಾಬು ಕೇಳಸ್ಕರ್ ಎಂಬುವವರಿಗೆ ಸೇರಿದ ಮನೆಯು ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಮುಖಂಡರಾದ ಶ್ರೀ ರವಿಕುಮಾರ್ ಎಂ. ಶೆಟ್ಟಿಯವರು ಮನೆಯವರಿಗೆ ಸಾಂತ್ವನ ಹೇಳಿ, 10000 ರೂಪಾಯಿಗಳ ಧನಸಹಾಯ ನೀಡಿ, ಹೆಚ್ಚಿನ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಮನವಿ ಮಾಡಿದರು.

RELATED ARTICLES  ಉಜ್ವಲ ಯೋಜನೆಯಡಿ ಕೊಡ್ಕಣಿಯಲ್ಲಿ ದಿನಕರ ಶೆಟ್ಟಿಯವರಿಂದ ಗ್ಯಾಸ್ ವಿತರಣೆ : ಕೋಡ್ಕಣಿ ಜನತೆಯ ಜೊತೆ ಸದಾ ಇರುವುದಾಗಿ ಭರವಸೆ ನೀಡಿದ ಶಾಸಕರು.

IMG 20180109 WA0004

ಈ ಸಂದರ್ಭದಲ್ಲಿ ಸತ್ವಾಧಾರ ನ್ಯೂಸ್ ಜೊತೆ ಮಾತನಾಡಿದ ಅವರು ಅನಾಹುತ ಘಟಿಸಿದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದು. ಮನೆಯವರು ಇದರ ಬಗ್ಗೆ ಬೇಸರಿಸದೆ ಧೈರ್ಯತಳೆಯಬೇಕು. ಕುಟುಂಬದವರ ಜೊತೆಗೆ ನಾವು ಇದ್ದೇವೆ. ಅಲ್ಪ ಪರಿಹಾರ ನೀಡಿದ್ದು ಇನ್ನೂ ಹೆಚ್ಚಿನ ಪರಿಹಾರವನ್ನು ಕೊಡಿಸುವ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

RELATED ARTICLES  ಲೈಟ್ ಫಿಶಿಂಗ್ ಹಾಗೂ ಬುಲ್‍ಟ್ರಾಲ್ ನಿಷೇಧಕ್ಕೆ ಕೇಳಿಬಂದಿದೆ ಒತ್ತಾಯ