ಭಟ್ಕಳ: ಇಲ್ಲಿನ ಜೆ.ಸಿ.ಐ ಭಟ್ಕಳ ಸಿಟಿ ಇವರ ನೇತೃತ್ವದಲ್ಲಿ ನ್ಯೂ ಸನಾ ಒಪ್ಟಿಕ್ಸ ಭಟ್ಕಳ, ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ವಾಗ್ದಾನ ಘೋಷಣಾ ಶಿಬಿರವನ್ನು ಸಹಾಯಕ ಆಯುಕ್ತ ಎಮ್.ಎನ್.ಮಂಜುನಾಥ ಇಲ್ಲಿನ ನ್ಯೂ ಸನಾ ಒಪ್ಟಿಕ್ಸನಲ್ಲಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಾಮಾಜಿಕ ಕಾರ್ಯದಿಂದಲೇ ಜೆ.ಸಿ.ಐ. ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಈಗ ಮನುಷ್ಯನ ಅತೀ ಸೂಕ್ಷ್ಮಅಂಗವಾದ ಕಣ್ಣಿನ ತಪಾಸಣೆ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದುದು. ಆಯೋಜಿಸಿದ ಶಿಬಿರವೂ ಒಳ್ಳೆಯ ಉದ್ದೇಶವಾಗಿದ್ದು, ಇದರ ಸದುಪಯೋಗ ಎಲ್ಲ ವರ್ಗದ ಜನರು ಪಡೆದುಕೊಳ್ಳಬೇಕು. ಎಂದು ಹೇಳಿದರು.

ಕಾರ್ಯಕ್ರಮ ಮುಖ್ಯ ಅತಿಥಿ ವಲಯ 15ರ ಅಧ್ಯಕ್ಷ ಜೆಎಂಎಫ್ ರಾಘವೆಂದ್ರ ಪ್ರಭು ಮಾತನಾಡಿದ್ದು “ನಾವು ಕಣ್ಣು ಮುಚ್ಚುವಾದ ಇನ್ನೊಬ್ಬರಿಗೆ ಕಣ್ಣು ನೀಡಿ ಇನ್ನೊಬ್ಬರ ಬಾಳಿಗೆ ಬೆಳಕು ನೀಡಿ ಮಣ್ಣಾಗಬೇಕು. ಮನುಷ್ಯ ತಾಯಿ-ತಂದೆ ಭಗವಂತನ ಋಣದ ಜೊತೆಗೆ ಭೂಮಿಯ ಋಣಿ ಹೊಂದಿ ಹುಟ್ಟುತ್ತಾನೆ. ಹುಟ್ಟು ಸಾವಿನ ಮಧ್ಯೆ ಜನರಿಗೆ ಸಹಾಯ ಮಾಡಿ ಸಾವಿನಲ್ಲು ಸಾರ್ಥಕತೆಯಿಂದ ಜೀವವನ್ನು ತ್ಯಜಿಸಬೇಕು ಆಗ ಭೂಮಿ ಋಣ ತಿರುತ್ತದೆ. ಎಂದರು.

RELATED ARTICLES  ದಶಕವನ್ನು ಪೂರೈಸಿದ ಬಿಜಿಎಸ್ ಸೆಂಟ್ರಲ್ ಶಾಲೆ ಮಿರ್ಜಾನ್, ಕುಮಟಾ.

ಉಡುಪಿ ಪ್ರಸಾದ್ ನೇತ್ರಾಲಯ ಕಣ್ಣಿನ ತಜ್ಞೆ ಡಾ. ನಿವೇದಿತಾ ಮಾತನಾಡಿದ್ದು ಶಿಬಿರದಲ್ಲಿ ನಿಮ್ಮ ಕಣ್ಣಿನ ಪ್ರಾಥಮಿಕ ಹಂತದ ತಪಾಸಣೆ ನಡೆಸಲಿದ್ದು, ಒಂದು ಸೂಕ್ಷ್ಮ ಅಂಗದ ಬಗ್ಗೆ ಕಾಳಜಿಯನ್ನು ಎಲ್ಲರೂ ವಹಿಸಲೇಬೇಕು. ನೇತ್ರದಾನ ವಾಗ್ದಾನ ಘೋಷಣಾವೂ ಹೇಗೆ ನೇತ್ರದಾನ ಮಾಡಬೇಕೆಂಬ ಬಗ್ಗೆ ಮಾಹಿತಿ ತಿಳಿಸಲಾಗುವುದು. ಮನುಷ್ಯ ಸತ್ತ 4 ಗಂಟೆ ಬಳಿಕ ಕಣ್ಣನ್ನು ತೆಗೆಯಲಾಗುವುದು ಎಂಬ ಮಾಹಿತಿಯನ್ನು ನೀಡಿದರು.

RELATED ARTICLES  ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಸೇವಂತಿಗೆ ತುಂಬಾ ಬೇಡಿಕೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಸಿ.ಐ ಭಟ್ಕಳ ಸಿಟಿ ಅಧ್ಯಕ್ಷ ಕೆ.ಜಬ್ಬರ್ ಸಾಹೇಬ್ ವಹಿಸಿದ್ದರು.

ಜೆ.ಸಿ.ಐ. ಸಂಸ್ಥಾಪಕ ಅಧ್ಯಕ್ಷ ನಾಗರಾಜ ಶೇಟ್ ಉಡುಪಿ ಪ್ರಸಾದ್ ನೇತ್ರಾಲಯದ ಇನ್ನೋರ್ವ ಕಣ್ಣಿನ ತಜ್ಞೆ ಡಾ. ಪ್ರಿಯಾ, ಜೆ.ಸಿ.ಐ. ಶಿರೂರು ಅಧ್ಯಕ್ಷ ಪಾಂಡುರಂಗ ಅಳ್ವೇಗದ್ದೆ, ಸ್ಥಳಿಯ ಸಮಾಜ ಸೇವಕ ನಜೀರ ಕಾಶೀಮ್, ಮಂಜುನಾಥ ಖಾರ್ವಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 200 ಶಿಬಿರಾರ್ಥಿಗಳು ಭಾಗವಹಿಸಿದ್ದು, ಶಿಬಿರದ ಸದುಪಯೋಗ ಪಡೆದುಕೊಂಡರು.